ಸ್ಕೌಟ್ಸ್ ಗೈಡ್ಸ್‌ನಿಂದ ವ್ಯಕ್ತಿತ್ವ ಬೆಳವಣಿಗೆ

kdr scotsd
ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಕೌಟ್ಸ್ ಗೈಡ್ಸ್ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರವನ್ನು ಶರತ್‌ಕಷ್ಣಮೂರ್ತಿ ಉದ್ಘಾಟಿಸಿದರು. ಡಾ. ಕೆ.ಎ.ರಾಜಣ್ಣ, ರಾಜೇಶ್ ಅವಲಕ್ಕಿ, ಜಗದೀಶ್, ಜ್ಯೋತಿ, ತಿಮ್ಮರಾಜ್ ಇದ್ದರು.
Published on

ಕಡೂರು: ಸಮಾಜದಲ್ಲಿನ ರಚನಾತ್ಮಕ ಪಾತ್ರಗಳನ್ನು ನಿರ್ವಹಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕಾರ್ಯಾಗಾರಗಳು ಪ್ರಮುಖಪಾತ್ರ ವಹಿಸಲಿವೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಶರತ್ ಕಷ್ಣಮೂರ್ತಿ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ರೋವರ್ಸ್ ಮತ್ತು ರೇಂಜರ್ಸ್‌ನಿಂದ ಬುಧವಾರ ಆಯೋಜಿಸಿದ್ದ ಮೂಲ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ಪಾಠ ಪ್ರವಚನಗಳಿಗೆ ಒತ್ತು ನೀಡುವಂತೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವುದರಿಂದ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲು ಅವಕಾಶವಾಗುತ್ತದೆ ಎಂದರು.

ಸ್ಕೌಟ್ಸ್ ಸಂಸ್ಥಾಪಕ ಬೇಡೆನ್ ಪೊವೆಲ್ ಹೇಳುವಂತೆ ಸ್ಕೌಟ್ಸ್ ಯುವ ಸಾಮಾಜಿಕ ಚಳವಳಿಯಾಗಿದೆ. ಕ್ರೀಡೆಗಳು ಸೇರಿದಂತೆ ಪ್ರಾಯೋಗಿಕ ಹೊರಾಂಗಣ ಚಟುವಟಿಕೆಗಳ ಮೇಲೆ ಒತ್ತುನೀಡುವ ಅನೌಪಚಾರಿಕ ಶಿಕ್ಷಣದ ಕಾರ್ಯಕ್ರಮವಾಗಿದೆ. ಅದರಲ್ಲಿಯೂ ಹದಿಹರೆಯದ ವಿದ್ಯಾರ್ಥಿಗಳಿಗಾಗಿ ಸ್ಕೌಟ್ಸ್ ಗೈಡ್ಸ್ ರಚಿಸಲಾಗಿದೆ. ಸಂಘಟನೆಯು ಶಿಸ್ತುಬದ್ಧವಾಗಿದ್ದು ಅನೇಕ ರಾಷ್ಟ್ರಗಳಲ್ಲಿ ಯುವಕರು ಸೇರ್ಪಡೆಗೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಪ್ರಾಚಾರ್ಯ ಡಾ. ಕೆ.ಎ.ರಾಜಣ್ಣ ಮಾತನಾಡಿ, ಯುವಕರು ಕಾಲೇಜು ಮಟ್ಟದಲ್ಲಿಯೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡರೆ ಮಾತ್ರ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ವ್ಯಕ್ತಿತ್ವ ವಿಕಸನ ಎಂಬ ವಿಷಯದ ಬಗ್ಗೆ ನಾಲ್ಕು ಜನ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶಿವಮೊಗ್ಗದ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ಡಿ. ಅವಲಕ್ಕಿ, ನಿವತ್ತ ಪ್ರಾಧ್ಯಾಪಕ ಎಚ್.ಎಸ್.ಜಗದೀಶಪ್ಪ, ರಾಜ್ಯಶಾಸ್ರತ್ತ ವಿಭಾಗದ ಮುಖ್ಯಸ್ಥೆ ಎನ್.ಎಸ್.ಪಂಕಜಾ, ಜಿ.ತಿಮ್ಮರಾಜು, ಎಚ್.ಆರ್.ಜ್ಯೋತಿ, ರಾಘವೇಂದ್ರಕುಮಾರ್, ಪ್ರಸನ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net