ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳ ಸೇವೆ ಅಮೋಘ

10..2
ಶೇಡಬಾಳ ಪಟ್ಟಣದ ಸನ್ಮತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಹನುಮಂತ ನೇರಲೆ, ಎಂ.ಆರ್.ಮುಂಜೆ, ಕೆ.ವಿ.ಶಾಮಲಾ, ವಿನೋದ ಬರಗಾಲೆ ಇತರರಿದ್ದರು.
Published on

ಕಾಗವಾಡ: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸೇವೆ ಅಮೋಘ ಎಂದು ಪಿಎಸ್‌ಐ ಹನುಮಂತ ನೇರಲೆ ಹೇಳಿದರು.

ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಮಹಾವಿದ್ಯಾಲಯದಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ರಾಜ್ಯ ಪುರಸ್ಕಾರ ಮತ್ತು ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಕೆಲಸ-ಕಾರ್ಯ ಸೇವಾ ಮನೋಭಾವದಿಂದ ಕೂಡಿರುತ್ತವೆ. ದೇಶ ರಕ್ಷಣೆ, ನೆರೆಹಾವಳಿ, ಅತಿವೃಷ್ಟಿ ಅಂತಹ ಸಂದಿಗ್ಧ ಸಮಯದಲ್ಲಿ ಭಾಗವಹಿಸಿ ಕರ್ತವ್ಯ ಪ್ರಜ್ಞೆ ಮೆರೆಯುತ್ತಾರೆ ಎಂದರು.

ಕ್ಷೇತ್ರ ಶಿಕ್ಷಣಾಕಾರಿ ಎಂ.ಆರ್.ಮುಂಜೆ ಮಾತನಾಡಿ, ಎಲ್ಲಕ್ಕಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದೆ. ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಸೇವಿಸಿ ದೇಶಸೇವೆಗೆ ಸನ್ನದ್ಧರಾಗುವಂತೆ ಕರೆ ನೀಡಿದರು. ಅಧ್ಯಕ್ಷ ವಿನೋದ ಬರಗಾಲೆ, ರಾಜ್ಯ ತರಬೇತಿ ಆಯುಕ್ತೆ ಕೆ.ವಿ. ಶಾಮಲಾ ಮಾತನಾಡಿದರು. ಶಿಬಿರದ ಮೇಲ್ವಿಚಾರಕ ಜೆ.ಎಸ್. ಬೋಳಸೂರ, ಜಯಶೀಲಾ, ಡಿ.ಬಿ.ಅತ್ತಾರ, ವಿಠ್ಠಲ ಎಸ್.ಬಿ., ಎಂ.ಆರ್.ಮುಂಜೆ, ಎಂ.ವೈ.ಪೂಜಾರಿ, ರವೀಂದ್ರ ಖಡಾಖಡಿ, ಎಸ್.ಬಿ.ಪಾಟೀಲ, ವಿನೋದ ರಗಾಲೆ, ಅಜಿತ ನಾಂದ್ರೆ, ರಾಜು ನಾಂದ್ರೆ, ಎಂ.ಎನ್.ಕಾಳೇನಟ್ಟಿ, ಬಾಹುಬಲಿ ಭಜನವಾಡ, ಎಂ.ಕೆ.ಕಾಂಬಳೆ, ಜಿ.ಎಂ.ಚೌಗುಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net