ಸ್ಕೌಟಿಂಗ್ ಮೂಲಕ ಮೌಲ್ಯಾಧಾರಿತ ಶಿಕ್ಷಣ

9 ckm 1
ಚಿಕ್ಕಮಗಳೂರು ಹೊರವಲಯದ ಬೀಕನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ಕೌರ‍್ಸ್ ಮತ್ತು ಗೈರ‍್ಸ್ ಮೂಲತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನುz್ದೆÃಶಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿದರು. ಷಡಾಕ್ಷರಿ, ಮಧುಸೂದನ್, ಸಂದ್ಯಾರಾಣಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕೇವಲ ಅಕ್ಷರಸ್ಥರನ್ನು ಮಾಡುವುದು ನಿಜವಾದ ಶಿಕ್ಷಣವಲ್ಲ, ನೈತಿಕವಾಗಿ ಹಾಗೂ ಸಾಮಾಜಿಕ ಬದ್ಧತೆಯಿರುವ ಪೀಳಿಗೆಯನ್ನು ಸಮಾಜಕ್ಕೆ ಬಿಡುಗಡೆ ಮಾಡುವ ಗುರುತರ ಜವಾಬ್ದಾರಿ ಶಿಕ್ಷಣ ವ್ಯವಸ್ಥೆ ಮೇಲಿದೆ. ಆದರೆ ಇಂದಿನ ದಿನಗಳಲ್ಲಿ ಅಂಕಗಳಿಕೆಯೇ ಮುಖ್ಯವಾಗಿರುವ ಗಳಿಗೆಯಲ್ಲಿ ಸ್ಕೌಟ್ ಗೈಡ್ಸ್ ಶಿಕ್ಷಣವು ರಾಷ್ಟçಪ್ರೇಮ, ಅನುಕಂಪ, ಸಾಮಾಜಿಕ ಕಳಕಳಿಯಂತಹ ಉದಾತ್ತ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.

ನಗರದ ಹೊರವಲಯದ ಬೀಕನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ಕೌರ‍್ಸ್ ಮತ್ತು ಗೈರ‍್ಸ್ ಮೂಲತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಲ್ಲಿ ಹೃದಯ ವೈಶಾಲತೆ, ಸೇವಾ ಮನೋಭಾವ, ಸಂಸ್ಕೃತಿಯ ಬಗ್ಗೆ ಗೌರವ, ದೈಹಿಕ ಶ್ರಮತೆ ಮತ್ತಿತರ ಗುಣಗಳನ್ನು ಪೋಷಿಸುವ ಸ್ಕೌಟ್ ಚಳುವಳಿ ವಿಸ್ತಾರವಾಗಬೇಕು. ಎಲ್ಲ ಮೊರಾರ್ಜಿ ಶಾಲೆಗಳಲ್ಲಿ ಕನಿಷ್ಠ ಎರಡು ದಳಗಳನ್ನು ಪ್ರಾರಂಭಿಸಬೇಕು. ಈ ದಿಸೆಯಲ್ಲಿ ಬೀಕನಹಳ್ಳಿ ಶಾಲೆಯು ಮುಂದಾಳತ್ವ ವಹಿಸುವ ವಿಶ್ವಾಸವಿದೆ ಎಂದರು.

ಮೊರಾರ್ಜಿ ಶಾಲೆಯ ಪ್ರಾಚಾರ್ಯ ಮಧುಸೂದನ್ ಮಾತನಾಡಿ, ಏಳು ದಿನದ ಈ ತರಬೇತಿಯಲ್ಲಿ ಕಲಿಯಲಾದ ವಿಷಯಗಳನ್ನು ತಮ್ಮ ತಮ್ಮ ಶಾಲೆಗೆ ತೆರಳಿದ ಕೂಡಲೇ ದಳಗಳನ್ನು ಪ್ರಾರಂಭಿಸಿ ಮಕ್ಕಳಿಗೆ ದಾಟಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್ ಷಡಕ್ಷರಿ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳು ಮೊಬೈಲ್ ದಾಸರಾಗಿ ದೈಹಿಕ ಚಟುವಟಿಕೆಗಳಿಲ್ಲದೆ ಮಾನಸಿಕ ಖಿನ್ನತೆ, ಬೊಜ್ಜು ಮತ್ತಿತರ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅವರಿಗೆ ಉಲ್ಲಾಸಕರವಾದ, ತರಗತಿಯ ಹೊರಗಿನ ವಾತಾವರಣವನ್ನು ಚಟುವಟಿಕೆಗಳ ಮೂಲಕ ನೀಡಿ ಅವರಿಗೆ ಬಾಲ್ಯವನ್ನು ಸಂತೋಷಕರವಾಗಿ ಮಾಡುವ ಕಾರ್ಯವನ್ನು ಸ್ಕೌಟ್ ಚಳುವಳಿಯ ಮೂಲಕ ನಿಡಬಹುದಾಗಿದೆ ಎಂದರು.

ಬೇರೆಯವರ ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳುವ ನಮ್ಮಗಳಿಗೆ ಮಾತೃ ಹೃದಯವಿರಬೇಕು. ಈಗಿನ ಸಮಾಜದಲ್ಲಿ ಮಕ್ಕಳಿಗೆ ಅನುಕರಿಸಬಲ್ಲ ವ್ಯಕ್ತಿತ್ವಗಳು ಕಾಣಸಿಗುವುದಿಲ್ಲ. ಆದ್ದರಿಂದ ಚಳವಳಿಯ ವಯಸ್ಕ ನಾಯಕರುಗಳು ಅನುಕರಣೀಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಜವಬ್ದಾರ ಪ್ರಜೆಗಳ ಜೊತೆಗೆ ಕ್ರಿಯಾಶೀಲ ಪ್ರಜೆಗಳಾಗುವ ಅವಶ್ಯಕತೆಯಿದೆ ಎಂದರು.

ಸ್ಕೌರ‍್ಸ್ ತರಬೇತಿ ಶಿಬಿರದ ಮುಖ್ಯಸ್ಥರಾಗಿ ಹೇಮಲತಾ ಹಾಗೂ ಗೈಡ್ಸ್ ಮುಖ್ಯಸ್ಥರಾಗಿ ಕಾತ್ಯಾಯಿನಿ ಜವಾಬ್ದಾರಿ ವಹಿಸಿಕೊಂಡರು. ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತೆ ಸಂದ್ಯಾರಾಣಿ, ಗೈಡ್ಸ್ ತರಬೇತಿ ಆಯುಕ್ತೆ ಪ್ರತಿಮಾ, ಕಾರ್ಯದರ್ಶಿ ನೀಲಕಂಠಚಾರ್, ಸಂಘಟಕ ಕಿರಣ್‌ಕುಮಾರ್, ರಕ್ಷಿತ್, ರಾಘವೇಂದ್ರ, ವಸಂತಕುಮಾರ್, ನಿಶಾಂತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net