

ಹಲಗೂರು: ಮುತ್ತತ್ತಿ ರಸ್ತೆಯಲ್ಲಿರುವ ಗೊಲ್ಲರಹಳ್ಳಿ ಮತ್ತು ಚಿಕ್ಕಎಲಚಗೆರೆ ಗ್ರಾಮದ ಬಳಿ ಶುಕ್ರವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟಿದ್ದಾರೆೆ.
ಮೂಲತಃ ಮಾಸ್ಟರ್ ದೊಡ್ಡಿ ಗ್ರಾಮದ ಲೇಟ್ ತಮ್ಮೇಗೌಡ ಅವರ ಪುತ್ರ ಬಸವರಾಜು (50) ಮೃತರು. ಇವರು ಕಾರ್ಯನಿಮಿತ್ತ ಹಲಗೂರಿಗೆ ಬಂದು ವಾಪಸ್ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್‌ಇನ್ಸ್‌ಪೆಕ್ಟರ್ ಬಿ.ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.