ಸೌಹಾರ್ದಯುತವಾಗಿ ಮೊಹರಂ ಆಚರಣೆ ಮಾಡಿ

moharam2 copy
Published on


ಯಾದಗಿರಿ: ಜಿಲ್ಲಾದ್ಯಂತ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ ಹಾಗೂ ಸೌಹಾರ್ದಯುತವಾಗಿ, ಆಚರಿಸುವಂತೆ ಜಿಲ್ಲಾಕಾರಿ ಸ್ನೇಹಲ್ ಆರ್., ಸಲಹೆ ನೀಡಿದರು.

ಹಬ್ಬದ ನಿಮಿತ್ತ ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಶಾಂತಿಸಭೆಯಲ್ಲಿ ಮಾತನಾಡಿ, ಆ.9 ರಂದು ಮೋಹರಂ ಆಚರಿಸಲಾಗುತ್ತದೆ. ಹಿಂದು ಹಾಗೂ ಮುಸ್ಲಿಂ ಬಾಂಧವರು ಪರಸ್ಪರ ಸಹಕಾರದೊಂದಿಗೆ ಶಾಂತಿ ಹಾಗೂ ಸೌಹಾರ್ದಯುತವಾಗಿ ಮತ್ತು ಸಂತಸದಿಂದ ಆಚರಿಸಬೇಕು. ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಆ.8ರಿಂದ 10ರ ಬೆಳಗ್ಗೆ 10 ಗಂಟೆಯವರೆಗೆ ಜಿಲ್ಲೆಯ ಎಲ್ಲ ವೈನ್ ಶಾಪ್, ಬಾರ್ಗಳು ಸಗಟು ಮತ್ತು ಚಿಲ್ಲರೆ ಮದ್ಯಮಾರಾಟ ನಿಷೇಸಿ ಆದೇಶಿಸಲಾಗಿದೆ ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಕಾರಿ ಡಾ.ಸಿ.ಬಿ. ವೇದಮೂರ್ತಿ ಮಾತನಾಡಿ, ಮೋಹರಂ ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ 450 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ. ಪಂಜಿನ ಮೆರವಣಿಗೆ, ಕೆಂಡ ತುಳಿಯುವುದು , ಸೇರಿದಂತೆ ಧಾಮರ್ಿಕ ವಿ ವಿಧಾನದಂತೆ ಹಬ್ಬ ಆಚರಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆಯೊಂದಿಗೆ ಆಚರಣೆ ಮಾಡಬೇಕು ಎಂದು ಹೇಳಿದರು.

ಹಬ್ಬದ ಅಂಗವಾಗಿ ಬೀಟ್ ಅಕಾರಿ , ವಿವಿಧ ರೌಂಡ್ಸ ಮತ್ತು ಪಾಯಿಂಟ್ಸ್ ಸ್ಥಳಗಳಲ್ಲಿ ಅಕಾರಿ ಸಿಬ್ಬಂದಿ ನೇಮಿಸಲಾಗಿದೆ. ನಗರದ ಮೈಲಾಪುರ ಬೇಸ್, ಬಸ್ ನಿಲ್ದಾಣ ಮಾರ್ಗಗಳಲ್ಲಿ ಮರವಣಿಗೆ ಮತ್ತು ಹಬ್ಬ ಆಚರಣೆ ಕುರಿತು ಅವಶ್ಶಕ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net