ಸೌಹಾರ್ದಯುತ ಬದುಕಿಗೆ ಪ್ರವಚನ ಪ್ರೇರಕ

250
Published on

ಮಾಂಜರಿ: ಉತ್ತಮ ಸಮಾಜಕ್ಕಾಗಿ ಹಾಗೂ ಸೌಹಾರ್ದಯುತ ಬದುಕಿಗಾಗಿ ಶ್ರಾವಣ ಮಾಸದ ಪ್ರವಚನಗಳು ನಮ್ಮ ಜೀವನದಲ್ಲಿ ಪ್ರೇರಕ ಶಕ್ತಿಗಳಾಗುತ್ತವೆ ಎಂದು ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಅಂಕಲಿ ಗ್ರಾಮದಲ್ಲಿರುವ ಶಿವಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಶ್ರಾವಣ ಮಾಸದ ಆಧ್ಯಾತ್ಮಿಕ ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದರು. ಪ್ರವಚನಗಳು ಮಾನವನ ಬದುಕಿಗೆ ಸಹಕಾರಿ ಯಾಗಿದ್ದು, ಪ್ರವಚನ ಆಲಿಸುವುದರಿಂದ ಮನೆ&ಮನಗಳಿಗೆ ಶಾಂತಿ ಸಿಗುವುದರಲ್ಲಿ ಬೇರೆ ಮಾತಿಲ್ಲ.

ಜತೆಗೆ ಹೊಸ ಉಲ್ಲಾಸ ವನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ರವಾನಿಸುತ್ತಿವೆ ಎಂದು ಹೇಳಿದರು. ಒಂದು ತಿಂಗಳ ವರೆಗೆ ಪ್ರವಚನ ನೀಡಿದ ಬೆಳಗಾವಿಯ ಕಾರಂಜಿ ಮಠದ ಶಿವಯೋಗಿ ದೇವರು ಹಾಗೂ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರಾಜೂರ ಮಲ್ಲಿಕಾರ್ಜುನ ಕೋರೆ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.

ಅಣ್ಣಾಸಾಹೇಬ ಜಕಾತೆ, ವಿಶ್ವನಾಥ ನಷ್ಟೀ, ಕುಮಾರ ಕೋರೆ, ತುಕಾರಾಮ ಪಾಟೀಲ, ಅಮರ ಕೋರೆ, ಪ್ರಶಾಂತ ಕೋರೆ, ನಾಗೇಶ ಮಜುಕರ, ಬಸವರಾಜ ಕೋರೆ, ಸುರೇಶ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net