

ಅರಸೀಕೆರೆ: ಭಾರತೀಯ ಸನಾತನ ಸಂಸ್ಕೃತಿ ಹಾಗೂ ಪರಂಪರೆಯನ್ನು ಜಗತ್ತಿನೆಲ್ಲಡೆ ಪಸರಿಸಿದ ಕೀರ್ತಿ ದಾರ್ಶನಿಕ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.
ತಮ್ಮ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 160ನೇ ಜಯಂತಿಯಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಜೀವನದಲ್ಲಿ ಸಚ್ಚ್ಯಾರಿತ್ರ್ಯ ರೂಪಿಸಿಕೊಳ್ಳುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು. ಸ್ನೇಹ,ಭ್ರಾತೃತ್ವ, ಸೌಹಾರ್ದತೆಯ ಸಂದೇಶ ನೀಡಿದ ಧೀಮಂತ ವ್ಯಕ್ತಿಯ ಉಪದೇಶಗಳನ್ನು ಅದರ್ಶವಾಗಿ ಸ್ವೀಕರಿಸಿದರೆ ಸಾರ್ಥಕ ಜೀವನ ನಡೆಸಬಹುದು. ಶಿಕ್ಷಣ ತಜ್ಞ ವೀರ ಸನ್ಯಾಸಿಯಾಗಿ ಧಾರ್ಮಿಕ ಪರಂಪರೆ,ಸಂಸ್ಖತಿಯನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಇಂದಿನ ಯುವ ಜನತೆ ಹಾಗೂ ಮಠಾಧೀಶರುಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.ಯುವ ಜನತೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಸ್ವಾಮಿವಿವೇಕಾನಂದರ ಜಯಂತಿ ನಿಮಿತ್ತ ರಾಷ್ಟ್ರೀಯ ಯವ ದಿನದ ಸಪ್ತಾಹವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶಾದ್ಯಂತ ಹಮ್ಮಿಕೊಂಡಿವೆ.ಇದರ ಭಾಗವೆನ್ನುವಂತೆ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ ಹಮ್ಮಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳಗೊಂಡಂತೆ ಸಚಿವರು ಯುವಜನರಿಗೆ ಸ್ಪೂರ್ತಿಯ ಸಂದೇಶ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಬಣ್ಣಿಸಿದರು.
ಮುಖಂಡರಾದ ಮಹೇಂದ್ರ ಕುಮಾರ್,ಲಾಳನಕೆರೆ ಯೋಗೀಶ್ ರಂಗನಾಥ್, ಶಿವು,ಕಾಟೀಕೆರೆ ಮೋಹನ್, ಡಾಬಾ ರಘು,ಮಹೇಂದ್ರಕುಮಾರ್, ಲೋಕೇಶ್,ಮಂಜು ಇನ್ನಿತರರಿದ್ದಾರೆ.