ಸೌಹಾರ್ದತೆ ಮೂಡಿಸಲು ಸಹಕರಿಸಿ

16.npk -01
Published on

ನಾಪೋಕ್ಲು: ಮುಸ್ಲಿಂ ಸಂಘಟನೆಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಿಲಾದ್ ಸಂದೇಶ ರ‌್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಸಂತೆ ಮೈದಾನದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಎಸ್.ಎಸ್. ಎಫ್ ಸಂಘಟನೆ ಅಧ್ಯಕ್ಷ ಹಫೀಜ್ ಸುಫ್ಯಾನ್ ಸಖಾಫಿ ಮಾತನಾಡಿ, ಸಮಾಜದಲ್ಲಿ ಸೌಹಾರ್ದತೆ ಮೂಡಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಸಮಾಜದಲ್ಲಿ ಶ್ರೀಮಂತ, ಬಡವರು ಇರುತ್ತಾರೆ. ಅಧಿಕಾರಿ ವರ್ಗ, ವೃತ್ತಿಪರ ವರ್ಗದವರೂ ಇರುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ರಂಗದಲ್ಲಿ ಗುರುತಿಸಿಕೊಂಡು ಗೌರವಯುತ ಜೀವನ ನಡೆಸಬೇಕು ಎಂದರು.
ಪವಿತ್ರ ಕುರ್ ಆನ್ ಗ್ರಂಥ ಜೀವನವನ್ನು ಸಾರ್ಥಕ ಪಡಿಸಬೇಕೆಂದು ಸಂದೇಶ ನೀಡಿದೆ. ಯಾವುದೇ ಸಮುದಾಯದ ಜನರೊಂದಿಗೆ ತಾರತಮ್ಯ ಮಾಡಬಾರದು ಎಂಬ ಸೂಚನೆ ನೀಡಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮೌಲ್ಯಯುತ ಬದುಕು ಸಾಗಿಸಬೇಕು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net