

ರಿಪ್ಪನ್‌ಪೇಟೆ: ದ್ವೇಷ, ಅಸೂಯೆಗಳಿಂದ ಏನನ್ನೂ ಸಾಸಲಾಗದು. ನಿಮ್ಮೂರಿನಲ್ಲಿ ಸೌಹಾರ್ದತೆ ಇರುವುದರಿಂದಲೇ ಹಬ್ಬ, ಉತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ನಾನು ಸಹ ಗ್ರಾಮೀಣ ಕುಟುಂಬದವನು. ನಮ್ಮೂರಿನಲ್ಲಿ ಎಲ್ಲ ಸಮಾದವರೂ ಇದ್ದಾರೆ. ನಮ್ಮ ಧರ್ಮದ ಪ್ರಸಾದ, ಮುಸಲ್ಮಾನರ ಬಿರಿಯಾನಿ, ಕ್ರಿಶ್ಚಿಯನ್ನರ ಕೇಕ್ ಎಲ್ಲವನ್ನೂ ತಿಂದು ಬೆಳೆದವರು ನಾವು. ನಮ್ಮ ಹಬ್ಬಕ್ಕೆ ಅವರು, ಅವರ ಹಬ್ಬಗಳಿಗೆ ನಾವು ಹೋಗಿ ಸಂಭ್ರಮಿಸುವುದು ಒಂದು ಪದ್ಧತಿ. ಇಂತಹ ಅವಿನಾಭಾವ ಸಂಬಂಧವಿದ್ದರೆ ಅಪನಂಬಿಕೆಗಳಿಗೆ ಅವಕಾಶವೇ ಇರುವುದಿಲ್ಲ ಎಂದರು.
ಹುಟ್ಟಿದ ಮಗುವಿಗೆ ಜಾತಿಯ ಲೇಪವಿರುವುದಿಲ್ಲ. ಬೆಳೆಯುತ್ತ ನಾವು ಅದನ್ನು ಕಟ್ಟಿಕೊಳ್ಳುತ್ತಿದ್ದೇವೆ. ಧರ್ಮದ ನೈಜ ತಳಹದಿಯನ್ನು ತಿಳಿಯಲಾರದೆ ಸಮಾಜದಲ್ಲಿ ಸಾಕಷ್ಟು ಸಾವು, ನೋವುಗಳಾಗುತ್ತಿವೆ. ಎಲ್ಲ ಧರ್ಮಗಳು ಶ್ರೇಷ್ಠ. ಯಾವುದೂ ಕನಿಷ್ಠವಲ್ಲ. ಗೌರಿ - ಗಣೇಶ, ಈದ್ ಮಿಲಾದ್ ಹಬ್ಬಗಳು ಒಟ್ಟೊಟ್ಟಿಗೆ ಬರುವುದು ಎಲ್ಲರನ್ನೂ ಸೇರಿಸುವ ಶುಭ ಸಂಕೇತ ಎಂದು ತಿಳಿಸಿದರು.
ಗಣೇಶನ ಮೆರವಣಿಗೆ ಸಂದರ್ಭ ಯಾವುದೇ ಅಚಾತುರ್ಯ ನಡೆಯದಂತೆ ಆಯೋಜಕರು ಜಾಗೃತಿ ವಹಿಸಬೇಕು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ದಕ್ಷ ಅಕಾರಿಗಳ ಸಮರ್ಥ ತಂಡವಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗಜ್ಜಿ, ಹೊಸನಗರ ಸಿಪಿಐ ಗುರಣ್ಣ ಹೆಬ್ಬಾಳ್, ಪಿಎಸ್‌ಐ ರಾಜು ರೆಡ್ಡಿ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಹಿಂದು ರಾಷ್ಟ್ರ ಸೇನೆಯ ಸುೀರ್, ಸುರೇಶ್ ಸಿಂಗ್, ಟಿ.ಆರ್.ಕೃಷ್ಣಪ್ಪ, ಹಸನಬ್ಬ, ಅಫ್ಜಲ್, ಆರ್.ಎ.ಚಾಬುಸಾಬ್, ಆಸೀಫ್ ಇತರರಿದ್ದರು.