

ಕಲಬುರಗಿ: ಶತಮಾನದ ಇತಿಹಾಸ ಹೊಂದಿದ ಸೌಹರ‍್ದ ಸಹಕಾರಿ ಕ್ಷೇತ್ರವೂ ವಿಶಾಲವಾಗಿದ್ದು, ಬೆಳಗಾವಿ, ಬೆಂಗಳೂರು ಹಾಗೂ ಬೀದರ್ಗೆ ಹೋಲಿಸಿದರೆ ಕಲಬುರಗಿ ಹಿಂದುಳಿದಿದ್ದು, ಪ್ರಗತಿ ಸಾಧಿಸಬೇಕು ಎಂದು ಸೌಹರ‍್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಸಿ.ಎ.ಜಿ ನಂಜನಗೌಡ ಆಶಯ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಸೌಹರ‍್ದ ಸಂಯುಕ್ತ ಸಹಕಾರಿ ನಿಯಮಿತ, ಜಿಲ್ಲಾ ಕರ‍್ಯನಿರತ ಪತ್ರರ‍್ತರ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಿಂದ ಶುಕ್ರವಾರ ರ‍್ಪಡಿಸಿದ್ದ ಸೌಹರ‍್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವ ನಿಮಿತ್ತ ಪತ್ರರ‍್ತರೊಂದಿಗೆ ಸಂವಾದದಲ್ಲಿ ಮಾತನಾಡಿದರು.
ರ‍್ಕಾರ ಬಿಟ್ಟರೆ ಅತಿ ಹೆಚ್ಚು ಜನ ಭಾಗವಹಿಸುವ ದೊಡ್ಡ ವಲಯ ಸಹಕಾರಿ ಸಂಸ್ಥೆ. ಕಟ್ಟ ಕಡೆಯ ವ್ಯಕ್ತಿ, ಮಹಿಳೆಗೆ ಸ್ವಾವಲಂಬಿ ಬದುಕು ನೀಡುತ್ತಿದೆ. ಮಹಿಳೆಯರು ಸಹಕಾರಿ ಸಂದ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಿದ್ದಾರೆ. ಕಲಬುರಗಿ ವಿಭಾಗದಲ್ಲಿ ಸೌಹರ‍್ದ ಸಹಕಾರ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ದೇಶಕ್ಕೆ ಸಹಕಾರಿ ಕಲ್ಪನೆ ನೀಡಿದ್ದು ರ‍್ನಾಟಕ. ೧೯೦೪ರಲ್ಲಿ ಪ್ರಾರಂಭವಾದ ಸಹಕಾರಿ ಕ್ಷೇತ್ರದ ಕರ‍್ಯ ಚಟುವಟಿಕೆ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಕೇಂದ್ರ ರ‍್ಕಾರ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿ ತುಂಬುತ್ತಿದೆ. ಅನೇಕ ಯೋಜನೆಗಳನ್ನು ರೂಪಿಸಿ ಸಹಕಾರಿ ವಲಯ ಬಲಿಷ್ಠ ಮಾಡಿದೆ. ಅಮೂಲ್, ಕೆಎಂಎಫ್ನಂತೆ ಸಹಕಾರಿ ಸಂಸ್ಥೆಗಳು ಬೆಳೆಯಬೇಕು ಎಂದರು.
ಶರಣಬಸವೇಶ್ವರ ವಿದ್ಯಾರ‍್ಧಕ ಸಂಘ ಕರ‍್ಯರ‍್ಶಿ ಬಸವರಾಜ ದೇಶಮುಖ ಮಾತನಾಡಿ, ಸಹಕಾರಿ ಎಂದರೆ, ನಮ್ಮದು ಎನ್ನುವ ಭಾವ ಬರುತ್ತದೆ. ಬಡ ಮಹಿಳೆಯರಿಗೆ ಸಹಕಾರಿ ಸಂಸ್ಥೆಗಳು ರ‍್ಥಿಕ ಸುಧಾರಣೆಗೆ ಶಕ್ತಿ ತುಂಬಿವೆ. ಬ್ಯಾಂಕ್ ವಹಿವಾಟು ಮಾಡಲು ಅಕ್ಷರಸ್ಥರನ್ನಾಗಿ ಮಾಡಿದೆ. ಸಹಕಾರಿ, ರ‍್ಕಾರ ಜಂಟಿಯಾದರೆ ರಾಜ್ಯದ ಪ್ರಗತಿಗೆ ಅನುಕೂಲವಾಗಲಿದೆ ಎಂದರು.
ವ್ಯವಸ್ಥಾಪಕ ನರ‍್ದೇಶಕ ಶರಣಗೌಡ ಪಾಟೀಲ್ ಮಾತನಾಡಿ, ಸೌಹರ‍್ದ ಸಹಕಾರಿ ರಜತ ಮಹೋತ್ಸವ ಆಚರಿಸುತ್ತಿದ್ದು, ಅರಿವು ಮೂಡಿಸಲು ಆ.೧೬ರಿಂದ ಪ್ರತಿ ಜಿಲ್ಲೆಯಲ್ಲೂ ಸಂರ‍್ಕ ಸಭೆ ಹಮ್ಮಿಕೊಳ್ಳಲಾಗಿದೆ. ಸ್ವಯಂ ಉದ್ಯೋಗ ಮಾಡುವ ಸದಸ್ಯರಿಗೆ ಸಹಕಾರ ನೀಡಲಾಗುತ್ತಿದೆ ಎಂದರು.
ಪತ್ರರ‍್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಸಹಕಾರ ಕ್ಷೇತ್ರದಿಂದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲವಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸಹ ಪತ್ರರ‍್ತರ ಯೋಗಕ್ಷೇಮಕ್ಕಾಗಿ, ಭವಿಷ್ಯದ ಜೀವನಕ್ಕಾಗಿ ಪತ್ರರ‍್ತರ ಸೌಹರ‍್ದ ಸಹಕಾರಿ ಸಂಘ ಸ್ಥಾಪಿಸುವ ಚಿಂತನೆ ಇದೆ. ಇದಕ್ಕೆ ಸಹಕಾರಿ ಸಂಘ ಸಂಸ್ಥೆಗಳ ಅಧಿಕಾರಿಗಳು ಸಹಕಾರ ಇರಲಿ ಎಂದರು.
ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೂಡ, ರಾಜ್ಯ ಸೌಹರ‍್ದ ಸಂಯುಕ್ತ ಸಹಕಾರಿ ನಿ.ದ ನರ‍್ದೇಶಕಿ ಶೈಲಜಾ ತಪಲಿ ಮಾತನಾಡಿದರು. ರಾಜ್ಯ ಸೌಹರ‍್ದ ಸಂಯುಕ್ತ ಸಹಕಾರಿ ನಿಯಮಿತದ ಸಹಕಾದಿಂದ ಪ್ರಾರಂಭವಾದ ಹತ್ತು ಕಾಮನ್ ರ‍್ವಿಸ್ ಸೆಂಟರ್ಗಳ ಕೀಲಿಕೈ ಸಾಂಕೇತಿಕವಾಗಿ ವಿತರಿಸಲಾಯಿತು.
ರಾಜ್ಯ ರ‍್ಕಾರದ ಸಂಯುಕ್ತ ಸಹಕಾರಿ ಸಂಘದ ಪ್ರಾಂತೀಯ ವ್ಯವಸ್ಥಾಪಕ ಸರ‍್ಯಕಾಂತ ರಾಖಲೆ, ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಟಿ.ವಿ ಶಿವಾನಂದನ, ಪತ್ರರ‍್ತರ ಸಂಘದ ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಸಂಗಮನಾಥ್ ರೇವಂತಗಾಂವ ಇತರರಿದ್ದರು.