ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಿ

oppo_2
oppo_2
Published on

ಕಲಬುರಗಿ: ಕಟ್ಟಡ ಕರ‍್ಮಿಕರಿಗೆ ಕರ‍್ಮಿಕರ ಇಲಾಖೆಯಲ್ಲಿ ಆರೋಗ್ಯ ವಿಮೆ, ಮದುವೆ, ಮರಣ, ಹೆರಿಗೆ, ಶೈಕ್ಷಣಿಕ ಸಹಾಯಧನ, ಪಿಂಚಣಿ ಸೇರಿ ಹಲವು ಸೌಲಭ್ಯಗಳು ಇದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಟ್ಟಡ ನರ‍್ಮಾಣ ಮತ್ತು ಇತರೆ ಕರ‍್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲಿಕರ‍್ಜುನ ಮಾಳಗೆ ಹೇಳಿದರು. ನಗರದ ಟೌನ್​ಹಾಲ್​ ಹತ್ತಿರದ ಮೈದಾನದಲ್ಲಿ ಕಟ್ಟಡ ಕರ‍್ಮಿಕ ಸಂಟನೆಗಳ ಸಮನ್ವಯ ಸಮಿತಿಯಿಂದ ಗುರುವಾರ ಹಮ್ಮಿಕೊಂಡ ವಿಶ್ವ ಕರ‍್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಸೆಂಟ್ರಿಂಗ್​ ಕಟ್ಟಡ ಕರ‍್ಮಿಕ ಸಂದ ಅಧ್ಯಕ್ಷ ಅಲ್ಲಾವುದ್ದಿನ್​ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ‍್ಮಿಕರು ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು. ಟ್ರೇಡ್​ ಯೂನಿಯನ್​ ಪ್ರಧಾನ ಕರ‍್ಯರ‍್ಶಿ ಶಿವಲಿಂಗ ಹಾವನೂರ ಮಾತನಾಡಿ, ಆರೋಗ್ಯ ವಿಮೆ ಕಡ್ಡಾಯಗೊಳಿಸುವಂತೆ ಆಗ್ರಹಿಸಿದರು. ಪ್ರಮುಖರಾದ ವೀರಾರೆಡ್ಡಿ, ನಾಗರಾಜ ಕಮಲಾಪುರ, ಪ್ರಕಾಶ ರ‍್ಗನ, ಮಲ್ಲಿಕರ‍್ಜುನ ದೇವಿ, ರಿಯಾಜ್​ ಪಟೇಲ್​, ಮಹ್ಮದ್​ ಬಾಬಾ, ಅಯ್ಯುಬ್​ ಖಾನ್​, ಅಹ್ಮದ್​ ಪಾಶಾ, ಜಾಕೀರ್​ ಹುಸೇನ್​, ಅಕ್ತರ ಮಿಯಾ, ಅಬ್ದುಲ್​ ಅಜೀಜ್​, ಶೇಖಮಿಯ್ಯಾ, ಅಹ್ಮದ್​ ಅಲಿ, ಮಹ್ಮದ್​ ಶೇಖ ಅಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net