

ಕಕ್ಕೇರಿ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇಂಟರ್ಯಾಕ್ಟಿವ್ ಸ್ಮಾರ್ಟ್ ಪೆನಲ್ ಬೋರ್ಡ್ ಮೂಲಕ ಬೋಧನೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇಂಟರ್ಯಾಕ್ಟಿವ್ ಸ್ಮಾರ್ಟ್ ಪೆನಲ್ ಬೋರ್ಡ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ 6 ಶಾಲೆಗಳಿಗೆ ತಲಾ 5 ಲ ರೂ. ವೆಚ್ಚದಲ್ಲಿ ಇಂಟರ್ಯಾಕ್ಟಿವ್ ಸ್ಮಾರ್ಟ್ ಪೆನಲ್ ಬೋರ್ಡ್ ನೀಡಲಾಗಿದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಕೆಪಿಎಸ್ ಅಧ್ಯ ಯಲ್ಲಪ್ಪ ಗುಪಿತ ಮಾತನಾಡಿದರು. ಗ್ರಾಪಂ ಅಧ್ಯೆ ಕವಿತಾ ಹಂಚಿನಮನಿ, ಬಿಇಒ ರಾಮಪ್ಪ. ಪಿ., ಬಿಆರ್ಪಿ ಎಸ್.ಬಿ.ನಾಯಕ, ಶಂಕರ ಕಮ್ಮಾರ, ಮಹಾಂತೇಶ ಕಿತ್ತೂರ, ಸಿಆರ್ಪಿ ಈರಣ್ಣ ಅಂಕಲಗಿ, ಪಿಡಿಒ ಸಂಜೀವ ಬೊಂಗಾಳೆ, ಎಸ್ಡಿಎಂಸಿ ಅಧ್ಯ ನಿಂಗೋಜಿ ಸಂಬರಗಿ, ಗ್ರಾಪಂ ಮಾಜಿ ಅಧ್ಯ ಮಹಾಂತೇಶ ಹಿರೇಮಠ, ಡಾ.ಪ್ರಸನ್ ದೊಡ್ಡೆಬೆಲ್ಕರ್, ಶಿವಲಿಂಗ ಚನ್ನಾಪುರ, ಮಲ್ಲಪ್ಪ ಮರಬದ, ನಾಗರಾಜ ಗೌಡಪ್ಪಗೋಳ, ಭೀಮರಾವ್ ಗುಪಿತ, ಅರ್ಜುನ ಮಂಜಲ್ಕರ, ಕಾಶೀಮ ಹಟ್ಟಿಹೋಳಿ, ಪಾಂಡು ಮಿಟಗಾರ, ರಮೇಶ ಬರಡೂರ, ಶಿಕರಾದ ಬಸಪ್ಪ ಅಪ್ಪೋಜಿ, ಹೇಮಾವತಿ ಹಿರೇಮಠ, ಸಂತೋಷ ಪಾಟೀ, ಎಸ್.ಬಿ.ಬಡಿಗೇರ, ಸಿ.ಜಿ.ಬಾವಿಮನಿ, ಎನ್. ಎಂ.ಬೆಳಗಾಂವಕರ ಇತರರಿದ್ದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 138 ವರ್ಷ ಪೂರೈಸಿದೆ. ಹೀಗಾಗಿ, ಶಾಲೆಗೆ ಮೂಲ ಸೌಕರ್ಯ ಒದಗಿಸುವ ಮೂಲಕ ಅಭಿವೃದ್ಧಿ ಪಡಿಸಿಬೇಕೆಂದು ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಶಾಸಕ ವಿಠ್ಠಲ ಹಲಗೇಕರಗೆ ಮನವಿ ಸಲ್ಲಿಸಿದರು. ಶ್ರೀದಲ್ಲೇ ಬೇಡಿಕೆ ಈಡೇರಿಸುವುದಾಗಿ ಶಾಸಕರು ಭರವಸೆ ನೀಡಿದರು.