ಸೌಲಭ್ಯ ಕಲ್ಪಿಸುವೆ ಫಲಿತಾಂಶ ನೀವು ಕೊಡಿ

1gkl2
Published on

ಗುರುಮಠಕಲ್: ಶಿಕ್ಷಣದ ಭದ್ರ ಬುನಾದಿಯೇ ಪ್ರಾಥಮಿಕ ಶಿಕ್ಷಣವಾಗಿದ್ದು, ಇದನ್ನು ಸುಧಾರಣೆ ಮಾಡುವ ಮಹತ್ವದ ಜವಾಬ್ದಾರಿ ಪ್ರಾಥಮಿಕ ಶಿಕ್ಷಕರ ಮೇಲಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಮತಕ್ಷೇತ್ರದ ಲಿಂಗೇರಿ ಸ್ಟೇಷ್ಟನ್, ಬಳಿಚಕ್ರ, ಮಾಧ್ವಾರ, ಕೊಂಕಲ್ ಮತ್ತು ಪುಟ್‌ಪಾಕ್ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಅವರು, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ನಾನು ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸುವೆ. ಆದರೆ ನೀರು ಉತ್ತಮ ಫಲಿತಾಂಶ ಕೊಡಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದ ವೈಫಲ್ಯ ಪ್ರಮುಖ ಕಾರಣವಾಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಹೀಗೆ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುವುದು ಬಿಟ್ಟು ಒಗ್ಗಟ್ಟಾಗಿ ಶಿಕ್ಷಣದ ಗುಣಮಟ್ಟ ಸುಧಾರಣೆ ಮಾಡುವುದು ಅಗತ್ಯವಿದೆ ಎಂದರು.

ನಮ್ಮ ಭಾಗದಲ್ಲಿ ಶಿಸ್ತು, ಶಿಕ್ಷಣ ಮತ್ತು ಆರೋಗ್ಯ ಸುಧಾರಣೆ ಆಗಬೇಕು. ವಿದ್ಯಾರ್ಥಿಗಳ ಹಾಜರಾತಿ ಸರಿಯಾಗಿ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಒಳಗಾಗಬಾರದು. ಒಂದು ವೇಳೆ ಯಾರಾದರೂ ಒತ್ತಾಯ ಮಾಡಿದರೆ ಸಹಾಯವಾಣಿಗೆ ದೂರು ಸಲ್ಲಿಸುವಂತೆ ಸೂಚಿಸಿದರು.

ಲಿಂಗೇರಿ ಸ್ಟೇಷ್ಟನ್ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ ಅವರು, ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಸಾರಿಗೆ ಬಸ್, ಆಟದ ಮೈದಾನ, ಶೌಚಗೃಹ, ದೈಹಿಕ ಶಿಕ್ಷಕರ ನಿಯೋಜನೆ ಇತ್ಯಾದಿ ಸಮಸ್ಯೆ ಕುರಿತು ಮಕ್ಕಳು ಶಾಸಕರ ಎದುರ ಬಿಚ್ಚಿಟ್ಟರು. ಈ ಎಲ್ಲ ಬೇಡಿಕೆ ಕೂಡಲೇ ಈಡೇರಿಸಲಾಗುವುದು. ಆದರೆ ನೀವು ನನಗೆ ಉತ್ತಮ ಫಲಿತಾಂಶ ನೀಡುವ ಭರವಸೆ ಕೊಡಬೇಕು ಎಂದು ತಿಳಿಸಿದರು.

ಈ ವೇಳೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಎಸ್. ಮುಧೋಳ, ಬಿಇಒ ಹವಳಪ್ಪ ಜಾನೆ, ಬಿಆರ್‌ಸಿ ಮಲ್ಲಿಕಾರ್ಜುನ ಪೂಜಾರಿ, ಶಿಕ್ಷಣ ಸಂಯೋಜಕ ಕಿಶನ್ ಪವಾರ್, ತಾಪಂ ಇಒ ಅಮರೇಶ, ಶಿಕ್ಷಣ ಇಲಾಖೆ ಜಿಲ್ಲಾ ತಾಂತ್ರಿಕ ಸಹಾಯಕ ಶರಣಗೌಡ ಆಶನಾಳ ಇತರರಿದ್ದರು.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ಪ್ರಾಥಮಿಕ ಶಿಕ್ಷಣ ಕಳಪೆಮಟ್ಟದಿಂದ ಕೂಡಿರುವುದೇ ಮೂಲ ಕಾರಣದು ಎಂದು ಪ್ರೌಢಶಾಲಾ ಶಿಕ್ಷಕರೊಬ್ಬರು ಹೇಳುತ್ತಿದ್ದಂತೆ ಇದಕ್ಕೆ ಉತ್ತರಿಸಿದ ಶಾಸಕರು ನೀವು ಅವರ ಮೇಲೆ, ಅವರು ನಿಮ್ಮ ಮೇಲೆ ಬೊಟ್ಟು ಮಾಡುವುದನ್ನು ಬಿಟ್ಟು ಶಿಕ್ಷಣ ಸುಧಾರಣೆಯತ್ತ ಗಮನ ಹರಿಸಿ ಎಂದು ಶಾಸಕ ಶರಣಗೌಡ ಕಂದಕುರ ಸೂಚಿಸಿದರು. ಶಾಲೆಗಳಿಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲು ನಾನು ಬದ್ಧನಾಗಿz್ದೆÃನೆ. ಆದರೆ ನೀವು ಪ್ರಸಕ್ತ ವರ್ಷದಲ್ಲಿ ಫಲಿತಾಂಶ ಹೆಚ್ಚಳ ಮಾಡಬೇಕು ಎಂದು ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net