

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ರಿಯಾನ್ಸಿ ಫಿಲ್ಮಸ್ ಬ್ಯಾನರ್ನಡಿ ನಿರ್ವಣವಾಗಿರುವ ‘ಸೌಥ್ ಇಂಡಿಯನ್ ಹೀರೋ’ ಸಿನಿಮಾ ಫೆ. 24ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ನರೇಶ ಕುಮಾರ ಎಚ್.ಎನ್. (ಹೊಸಹಳ್ಳಿ) ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಸ್ಟ್ರ್ಯಾಂಕ್ ರಾಜು ಅಂತಹ ಹಿಟ್ ಸಿನಿಮಾಗಳ ನಂತರ ಇದೀಗ ಸೌಥ್ ಇಂಡಿಯಾ ಹೀರೋ ಸಿನಿಮಾ ನಿರ್ದೇಶನ ಮಾಡಿದ್ದು, ಚಿತ್ರದ ಕಥೆ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾ ಉತ್ತರ ಕರ್ನಾಟಕ ಭಾಷೆಯಲ್ಲಿದೆ. ಚಿತ್ರದಲ್ಲಿ 4 ಹಾಡುಗಳು ಇದ್ದು, ಹಂಪಿ, ಬೆಂಗಳೂರು, ಲಡಾಕ್ನಲ್ಲಿ ಚಿತ್ರೀಕರಣವಾಗಿದೆ ಎಂದರು.
ಚಿತ್ರದ ನಾಯಕ ನಟ ಸಾರ್ಥಕ, ನಟಿ ಕಾಶೀಮಾ ರಫಿ, ಸಹನಟ ಅಮಿತ್, ಜಗದೀಶ ನಡನಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.