

ಮೈಸೂರು: ಸೌಜನ್ಯಾ ಭಿತ್ತಿ ಚಿತ್ರ ರಚನೆ ಶಿಬಿರವನ್ನು ನಗರದ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸೌಜನ್ಯಾ ಕೊಲೆ ಪ್ರಕರಣವನ್ನು ಮರು ತನಿಖೆಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆ.28ರಂದು ಬೆಳ್ತಂಗಡಿ ಚಲೋ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ ಪೂರ್ವಭಾವಿಯಾಗಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಲಾವಿದ ಬಾದಲ್ ನಂಜುಂಡಸ್ವಾಮಿ, ರಂಗಕರ್ಮಿಗಳಾದ ಜನಾರ್ದನ್(ಜನ್ನಿ), ಸಿ.ಬಸವಲಿಂಗಯ್ಯ, ಸಾಹಿತಿಗಳಾದ ನಾ.ದಿವಾಕರ, ಪ್ರೊ.ಕಾಳೇಗೌಡ ನಾಗವಾರ ಇನ್ನಿತರರು ಇದ್ದರು