ಸೌಖ್ಯ ಹೆಲ್ತ್ ಕೇರ್‌ನಿಂದ ಉಚಿತ ಆರೋಗ್ಯ ತಪಾಸಣೆ

Soukya
Published on

ಚಿತ್ರದುರ್ಗ: ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಸೌಖ್ಯ ಹೆಲ್ತ್ ಹಾಗೂ ಸ್ಕಿನ್ ಕೇರ್ ಆಸ್ಪತ್ರೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಆಕಾಶವಾಣಿ ವತಿಯಿಂದ ಮಂಗಳವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ರಕ್ತದೊತ್ತಡ, ಮಧುಮೇಹ, ಚರ್ಮರೋಗ, ದಂತರೋಗ, ನೇತ್ರ ಸೇರಿ ಇನ್ನಿತರೆ ಕಾಯಿಲೆಗಳ ಸಂಬಂಧ 150ಕ್ಕೂ ಹೆಚ್ಚು ಮಂದಿಗೆ ಆಸ್ಪತ್ರೆಯ ವೈದ್ಯರು ಉಚಿತ ಆರೋಗ್ಯ ತಪಾಸಣೆ ನಡೆಸಿದ ನಂತರ ಔಷಧಿಗಳನ್ನು ಉಚಿತವಾಗಿ ವಿತರಿಸಿದರು.

ಇದೇ ವೇಳೆ ಸೌಖ್ಯ ಹೆಲ್ತ್ ಹಾಗೂ ಸ್ಕಿನ್ ಕೇರ್ ಆಸ್ಪತ್ರೆಯ ಎಮರ್ಜೆನ್ಸಿ ಫಿಜಿಷಿಯನ್ ಮತ್ತು ಡಯಾಬಿಟಾಲಜಿಸ್ಟ್ ಡಾ. ಸಂತೋಷ್ ಉಜ್ಜನಪ್ಪ, ಹಿರಿಯ ದಂತ ವೈದ್ಯೆ ಡಾ.ಕೆ.ಎಂ. ಶೋಭಾ ಉಜ್ಜನಪ್ಪ, ಚರ್ಮ ಮತ್ತು ಲೈಂಗಿಕ ರೋಗ ತಜ್ಞೆ ಡಾ.ಡಿ.ಆರ್. ಅಪೂರ್ವ, ನೇತ್ರ ತಜ್ಞ ಡಾ.ಬಿ. ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.

ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಜರುಲ್ಲಾ, ಉಪ ಕಾರ್ಯದರ್ಶಿ ಅನಂತರೆಡ್ಡಿ, ಶಿವರಾಂ, ಗಾಯತ್ರಿ ಶಿವರಾಂ, ಸುರೇಶ್, ಆಕಾಶವಾಣಿಯ ನಿರೂಪಕ ನವೀನ್ ಮಸ್ಕಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net