

ಘಟಪ್ರಭಾ: ಸಮೀಪದ ಮಲ್ಲಾಪುರ ಪಿಜಿಯ ಘಟಪ್ರಭಾ ಶಾಖೆಯ ಸೌಕರ್ಯ ವಿವಿಧೋದ್ದೇಶ ಸೌಹಾರ್ದ ಕೋ-ಆಪ್ ಸೊಸೈಟಿಯ ಎಲ್ಲ ಆಡಳಿತ ಮಂಡಳಿ ಸದಸ್ಯರ ಒಮ್ಮತದ ಮೇರೆಗೆ ಐದು ವಷರ್ ಅವಧಿಗಾಗಿ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಸುರೇಶ ಕಾಡದವರ ಹಾಗೂ ಉಪಾಧ್ಯಕ್ಷರಾಗಿ ಭೂಪಾಲ ಖೇಮಲಾಪೂರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಚುನಾವಣಾ ಅಧಿಕಾರಿ ಸಂತೋಷ ಹೆಗಡೆ ಅವಿರೋಧ ಆಯ್ಕೆ ಘೋಷಿಸಿದರು.
ಇದಕ್ಕೂ ಮುನ್ನ 2024ರಿಂದ ಐದು ವರ್ಷಗಳವರೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಮಂಗಳವಾರ ಸಲಹಾ ಮಂಡಳಿ ಸದಸ್ಯರಾಗಿ ಕೆಂಪಣ್ಣ ಕಾಡದವರ ಅವರನ್ನು ನೇಮಿಸಲಾಯಿತು.
ನಿರ್ದೇಶಕರಾದ ಲಕ್ಷ್ಮಣ ಗಣಪ್ಪಗೋಳ, ಗಂಗಾಧರ ಬಡಕುಂದ್ರಿ, ಬೀರಪ್ಪ ಡಬಾಜ, ಜಗದೀಶ ಕಾಡದವರ, ಅಪ್ಪಾಜಿ ಹುದ್ದಾರ, ರಾಮಪ್ಪ ವಡೇರ, ನಿಂಗಪ್ಪ ಮಾಳ್ಯಾಗೋಳ, ಲಕ್ಷ್ಮಣ ಶೀಮಕ್ಕನವರ, ಹಾಲಪ್ಪ ನಿಡಸೋಸಿ, ಮಹಾದೇವ ಚವ್ಹಾಣ, ಶಂಕರ ದಳವಾಯಿ, ಸವೀತಾ ಚೌಗಲಾ, ಗೀತಾ ನಾಗನೂರ, ಸಂಘದ ಸಿಇಒ ಮಲಗೌಡ ಪಾಟೀಲ ಇತರರಿದ್ದರು.