ಸೌಕರ್ಯ ವಂಚಿತ ಶತಮಾನದ ಶಾಲೆ

Untitled-1
Published on

ಶಿಥಿಲಾವಸ್ಥೆಯಲ್ಲಿ ಅಡುಗೆಕೋಣೆ, ದುರಸ್ತಿಗೆ ಅಧಿಕಾರಿಗಳ ರ್ನಿಲಕ್ಷ$್ಯ,ಬಡಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತ

ಕೆ.ಆರ್​.ಚಂದ್ರಶೇಖರ್​ ಲಕ್ಕೂರು

ಸ್ವಾತಂತ್ರ ಪೂರ್ವ ಬ್ರಿಟಿಷರು, ಮೈಸೂರು ರಾಜ್ಯಾಡಳಿತದ ಅವಧಿಯಲ್ಲಿ ಆರಂಭಗೊಂಡ ಶಾಲೆ ಸದ್ಯ ಶತಮಾನ(124 ವರ್ಷ) ಪೂರೈಸಿದೆ. ಆದರೆ ಆಗಲೋ, ಈಗಲೋ ಬೀಳುವ ಹಂತದಲ್ಲಿದೆ. ಅಡುಗೆಕೋಣೆ, ಕಾಂಪೌಂಡ್​, ಶುದ್ಧ ಕುಡಿಯುವ ನೀರಿನ ಟಕ, ಶೌಚಗೃಹ ಸೇರಿ ಯಾವ ಸೌಕರ್ಯಗಳೂ ಇಲ್ಲ. ಇವೆಲ್ಲವಕ್ಕೂ ಮೇಲಾಗಿ ಶಾಲೆಯಲ್ಲಿ ಮುಖ್ಯಶಿಕ್ಷಕರೇ ಇಲ್ಲ!.

ಹೌದು....1900ರಲ್ಲಿ ಮಾಲೂರು ತಾಲೂಕಿನಲ್ಲೇ ಪ್ರಥಮವಾಗಿ ಲಕ್ಕೂರಿನಲ್ಲಿ ಆರಂಭವಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದು, ಸದ್ಯ ಎಲ್​ಕೆಜಿ ಹಾಗೂ 1 ರಿಂದ 8ನೇ ತರಗತಿವರೆಗೆ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳ ರ್ನಿಲಕ್ಷ$್ಯ, ಇಲಾಖೆ ಬೇಜವಾಬ್ದಾರಿಯಿಂದ ಶಾಲೆಯನ್ನು ಕಡೆಗಣಿಸಲಾಗಿದ್ದು, ಸೌಕರ್ಯಗಳ ಕೊರತೆಯಲ್ಲೇ ವಿದ್ಯಾರ್ಥಿಗಳು ಜೀವನ ದೂಡುತ್ತಿದ್ದಾರೆ. ಮೇಲಾಗಿ ಶಾಲೆಯಲ್ಲಿ ಮುಖ್ಯಶಿಕ್ಷಕರೇ ಇಲ್ಲ. ಶಾಲೆಯ ಶಿಕ್ಷಕರೊಬ್ಬರು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿಯಾಗಿ ಸುಮಾರು ವರ್ಷಗಳೇ ಕಳೆದಿವೆ. ಅಲ್ಲದೆ, ಇತ್ತೀಚೆಗೆ ವಿಜ್ಞಾನ ಶಿಕ್ಷಕರೂ ವರ್ಗಾವಣೆಗೊಂಡಿದ್ದು, ಇದುವರೆಗೂ ಯಾರೂ ನೇಮಕವಾಗಿಲ್ಲ. ಶಾಲೆಗೆ ಸೌಕರ್ಯ ಕಲ್ಪಿಸುವುದಿರಲಿ ಕೊನೇ ಪಕ್ಷ ಖಾಲಿಇರುವ ಹುದ್ದೆಗಳನ್ನು ತುಂಬುವ ಇಚ್ಛಾಶಕ್ತಿಯೂ ಸರ್ಕಾರಕ್ಕೆ ಇಲ್ಲದಿರುವುದು ಬಡವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದುಕೊಂಡಂತಾಗಿದೆ.

ಬಿಸಿಯೂಟ ಸಿಬ್ಬಂದಿ ಮೇಲೆ ಕುಸಿದು ಬಿದ್ದ ಮೇಲ್ಛಾವಣಿ: ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕೋಣೆ ಈಗಲೋ ಅಗಲೋ ಬೀಳುವ ಸ್ಥಿತಿಯಲ್ಲಿದೆ. ಕೆಲವೊಮ್ಮೆ ಅಡುಗೆ ಮಾಡುವಾಗ ಮೇಲ್ಛಾವಣಿ ಸಿಮೆಂಟ್​ ಪದರು ಸಾಂಬರ್​, ಅನ್ನದಲ್ಲಿ ಬಿದ್ದು, ಆಡುಗೆ ವ್ಯರ್ಥವಾದ ಉದಾಹರಣೆಗಳೂ ಇವೆ. ಅಡುಗೆ ಕೋಣೆ ದುರಸ್ತಿಗೆ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ ಪರಿಣಾಮ ಸುಮಾರು 2 ವರ್ಷದಿಂದ ಹೊಸದಾಗಿ ಅಡುಗೆ ಮನೆ ನಿರ್ಮಿಸಲಾಗುತ್ತಿದೆಯಾದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಪರಿಣಾಮ ಹಳೇ ಅಡುಗೆಮನೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲಾಗುತ್ತಿದೆ. ಮಂಗಳವಾರ ಅಡುಗೆ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಮೇಲ್ಛಾವಣಿ ಉದುರಿ ಬಿದ್ದಿದೆ. ಪರಿಣಾಮ ಬೆನ್ನು ಹಾಗೂ ಭುಜದ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರತಿದಿನ ಜೀವಭಯದಲ್ಲೇ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶೌಚಕ್ಕೂ ಪರದಾಟ: ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳಿಗೆ ಒಂದೇ ಕಡೆ ಶೌಚಗೃಹ ನಿರ್ಮಿಸಿರುವುದರಿಂದ ಹೆಣ್ಣು ಮಕ್ಕಳು ಮುಜುಗರ ಪಡುವಂತಾಗಿದೆ. ಅಲ್ಲದೆ ಶೌಚಗೃಹದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲದ ಪರಿಣಾಮ ವಿದ್ಯಾರ್ಥಿಗಳು ತೀವ್ರವಾಗಿ ಪರದಾಡುವಂತಾಗಿದೆ. ಶೌಚಗೃಹದ ಸಮೀಪ ಗಿಡ&ಗಂಟಿ ಬೆಳೆದಿದ್ದು, ಅವುಗಳನ್ನು ತೆರವುಗೊಳಿಸದ ಕಾರಣ ವಿಷ&ಜಂತುಗಳ ಭಯ ಶುರುವಾಗಿದೆ. ಇದೇ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ಬಯಲಿನಲ್ಲಿಯೇ ಮೂತ್ರ ವಿಸರ್ಜಿಸುತ್ತಾರೆ. ಒಂದು ವರ್ಷದ ಹಿಂದೆ ನೂತನವಾಗಿ ಶೌಚಗೃಹವನ್ನು ನಿರ್ಮಿಸಲಾಗಿದ್ದರೂ ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡದೆ ಬೀಗ ಹಾಕಲಾಗಿದೆ.

ಕುಡುಕರ ಹಾವಳಿ: ಶಾಲೆಗೆ ಸರಿಯಾದ ಕಾಂಪೌಂಡ್​ ವ್ಯವಸ್ಥೆ ಇಲ್ಲದ ಕಾರಣ ಆವರಣದಲ್ಲಿನ ಹಣ್ಣಿನ ಗಿಡಗಳನ್ನು ದನಕರುಗಳು ತಿಂದು ಹಾಕಿವೆ. ಸಂಜೆಯಾದರೆ ಕುಡುಕರ ಹಾವಳಿ ಹೆಚ್ಚಾಗುತ್ತದೆೆ. ರಾತ್ರಿ ಮಧ್ಯ ಸೇವನೆ ಮಾಡುವ ಕಿಡಿಗೇಡಿಗಳು ಮಧ್ಯದ ಬಾಟಲ್​ಗಳನ್ನು ಶಾಲಾವರಣದಲ್ಲೇ ಎಸೆದು ಹೋಗುತ್ತಾರೆ. ಅಲ್ಲದೆ, ತಂಬಾಕು, ಗುಟ್ಖಾ ಜಗಿದು ಗೋಡೆಗಳ ಮೇಲೆ ಉಗಿಯುತ್ತಾರೆ. ಶಾಲೆ ಆವರಣದಲ್ಲಿಯೇ ಮೂತ್ರ ಮಾಡುತ್ತಾರೆ. ಇದು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಸಂ&ಸಂಸ್ಥೆಗಳ ನೆರವು:ತಲುಪಿದಾಗ ಹಳೇ ವಿದ್ಯಾರ್ಥಿಗಳು, ವಿವಿಧ ಸಂ&ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ಹೊಸದಾಗಿ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಅಲ್ಲದೇ ದೆಹಲಿಯ ಪ್ಲಾನೆಟ್​ ವಾಟರ್​ ೌಂಡೇಷನ್​ ಸಂಸ್ಥೆ 2020ರಲ್ಲಿ ಸುಮಾರು 7ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವನ್ನು ಸುಮಾರು 25ಕ್ಕೂ ಹೆಚ್ಚು ಸದಸ್ಯರು ಸ್ವತ@ ಶ್ರಮದಾನದ ಮೂಲಕ ಒಂದೇ ದಿನದಲ್ಲಿ ನಿರ್ಮಿಕೊಟ್ಟಿದ್ದರು. ಆದರೆ ನಿರ್ವಹಣೆಯಿಲ್ಲದೆ ನೀರಿನ ಟ್ಯಾಂಕ್​ ಹಾಳಾಗಿದ್ದು, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಶಾಲೆಯ ಶಿಕ್ಷಕರೇ 1 ಕಿ.ಮೀ. ದೂರದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೋಗಿ ನೀರು ತರುವಂತಾಗಿದೆ.

ಶಾಲೆಯಲ್ಲಿ ಅಂಗ್ಲ ಮಾಧ್ಯಮಕ್ಕೆ ಪೂರಕವಾದ ಅಬ್ಯಾಕಸ್​ ಇಲ್ಲವೆ ಕಂಪ್ಯೂಟರ್​ ಶಿಕ್ಷಣ ನೀಡುವುದರಿಂದ ಮಕ್ಕಳ ಕಲಿಕಾಸಕ್ತಿ ಹೆಚ್ಚಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಶಾಲೆ ಆವರಣದಲ್ಲಿ ಒಂದೆರಡು ಕಡೆ ಎತ್ತರದ ವಿದ್ಯುತ್​ ಕಂಬಗಳನ್ನು ಸ್ಥಾಪಿಸಿ ದೀಪಗಳನ್ನು ಅಳವಡಿಸಿದರೆ ರಾತ್ರಿ ಸಮಯದಲ್ಲಿ ಪುಂಡ&ೋಕರಿಗಳ ಹಾವಳಿಗೆ ಕಡಿವಾಣ ಹಾಕಬಹುದು. ಶಾಲಾ ಸಹಾಯಕರನ್ನು ನೇಮಕ ಮಾಡಿದಲ್ಲಿ ನಿರ್ವಹಣೆ ಮಾಡಲು ಸಹಕಾರವಾಗುತ್ತದೆ. ಬೀಟ್​ ಪೊಲೀಸರು ಆಗಾಗ ಭೇಟಿ ನೀಡಿದರೆ ಅನುಕೂಲವಾಗುತ್ತದೆ.

ಚೇತನ್​ಗೌಡ, ಗ್ರಾಪಂ ಸದಸ್ಯ

ಇತ್ತೀಚೆಗೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೊಠಡಿಗಳಲ್ಲಿ ಪೀಠೋಪಕರಣಗಳ ಅವಶ್ಯಕತೆ ಇದೆ. ಶಾಲೆಗೆ ಸೌಕರ್ಯ ಒದಗಿಸುವಂತೆ ಗ್ರಾಮ ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಲಿಖಿತವಾಗಿ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಖಾಲಿಯಾದ ಹುದ್ದೆಗಳನ್ನು ತುಂಬುವ ಇಚ್ಛಾಶಕ್ತಿ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗಿಲ್ಲ. ದಾನಿಗಳಾದರೂ ಅಗತ್ಯ ನೆರವು ನೀಡಲಿ.

 ಪುರುಷೋತ್ತಮ.ಸಿ. ಅಧ್ಯಕ್ಷ, ಎಸ್​ಡಿಎಂಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net