ಸೋಸಲಗೆರೆ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟನೆ

IMG_20230909_142135
Published on

ನುಗ್ಗೇಹಳ್ಳಿ: ತಾಲೂಕಿನ 340 ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹೈನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ರೈತರಿಗೆ ತಿಂಗಳಿಗೆ 23 ಕೋಟಿ ರೂ. ವಿತರಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಸೋಸಲಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ರೈತರಿಗೆ ಒಂದು ಲೀಟರ್ ಹಾಲಿಗೆ 34 ರೂಪಾಯಿ 20 ಪೈಸೆ ಸಿಗುತ್ತದೆ. ಜಿಡ್ಡಿನಂಶ ಹೆಚ್ಚಾಗಿರುವ ಹಾಲಿಗೆ ಹೆಚ್ಚು ಹಣ ಸಿಗುತ್ತಿದೆ ಎಂದರು. ತಾಲೂಕಿನಲ್ಲಿ ಕೇವಲ 8 ಜನ ಪಶು ವೈದ್ಯರಿದ್ದು, 21 ಜನ ಪಶು ವೈದ್ಯರ ಕೊರತೆ ಇದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಹೆಚ್ಚುವರಿ ವೈದ್ಯರನ್ನು ನೇಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಸೋಸಲಗೆರೆ ಸಂಘಕ್ಕೆ 3 ಸಾವಿರ ಲೀಟರ್ ಸಾಮರ್ಥ್ಯದ ಬಲ್ಕ್‌ಮಿಲ್ಕ್ ಕೂಲರ್ ಘಟಕ ಮಂಜೂರಾಗಿದೆ. ಈ ಸಂಘದಲ್ಲಿ 15 ಲಕ್ಷ ರೂ. ಠೇವಣಿ ಇಡಲಾಗಿದೆ. ರೈತರಿಗೆ 6 ಲಕ್ಷ ರೂ. ಬೋನಸ್ ನೀಡಲಾಗುತ್ತದೆ. 22 ಲಕ್ಷ ರೂ. ವೆಚ್ಚದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ತಾಲೂಕಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ರೈತರಿಗೆ ಶೇ.50ರ ರಿಯಾಯಿತಿ ದರದಲ್ಲಿ ಮ್ಯಾಟ್, ಮೇವು ಕಟಾವು ಯಂತ್ರಗಳನ್ನು ವಿತರಿಸಲಾಗುತ್ತಿದ್ದು, ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಮಾರಂಭದಲ್ಲಿ ಡಾ.ಲೋಕೇಶ್, ಸಹಕಾರ ಸಂಘದ ಅಧ್ಯಕ್ಷೆ ಲಲಿತಮ್ಮ ಮಂಜೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಬೋರೇಗೌಡ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ರಾಜಕುಮಾರ್, ರಾಜಮ್ಮ, ರವಿ, ಕಾರ್ಯದರ್ಶಿ ಸಂತೋಷ್, ಭರತ್, ಮುಖಂಡರಾದ ಎಸ್. ಜೆ. ವಾಸು, ಬಿ.ಆರ್. ದೊರೆಸ್ವಾಮಿ, ತೋಟಿ ನಾಗರಾಜ್, ಬೆಳಗಳ್ಳಿ ಪುಟ್ಟಸ್ವಾಮಿ, ಎಂ.ಆರ್. ವಾಸು, ಎಸ್. ಎಂ. ಮಧು, ನವೀನ್, ಭೀಮೇಶ್, ಸುರೇಶ್, ಶಂಕರ್, ನಂದನ್, ಸಹಾಯಕ ವ್ಯವಸ್ಥಾಪಕರಾದ ಯೋಗೇಶ್, ದಯಾನಂದ್, ಕೃಷ್ಣಮೂರ್ತಿ, ಮಹದೇವಸ್ವಾಮಿ, ಪ್ರಶಾಂತ್, ವಿದ್ಯಾ, ಅಪರ್ಣಾ, ನಿರ್ದೇಶಕರಾದ ಹರೀಶ್, ರಾಜೇಶ್, ದಾನಪ್ಪಗೌಡ, ಬೆಟ್ಟೆಗೌಡ, ಸುರೇಶ್, ಸುಜಾತ ಪ್ರಕಾಶ್, ಸಂತೋಷ್, ಕಿರಣ್, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net