ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ

ydg05
Published on

ಶಹಾಪುರ: ಕೈ ಕುಸ್ತಿ ಮತ್ತು ಭಾರ ಎತ್ತುವುದು ಗ್ರಾಮೀಣ ಸ್ಪರ್ಧೆಗಳಾಗಿದ್ದು, ಈ ಸ್ಪರ್ಧೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕರ‍್ಯದರ್ಶಿ ಉಮೇಶ ಮುದ್ನಾಳ್ ಹೇಳಿದರು.

ಶಹಪುರ ತಾಲೂಕಿನ ಕಾರಣಿಗಿ ಗ್ರಾಮದಲ್ಲಿ ಭಾಗ್ಯವಂತಿ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಕೈ ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಸದೃಢಗೊಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಗ್ರಾಮೀಣ ಭಾಗದ ಕ್ರೀಡೆಗಳು ನಸಿಸಿ ಹೋಗುತ್ತಿದ್ದು, ಇಂತಹ ಜಾತ್ರಾ ಮಹೋತ್ಸವದಲ್ಲಿ ಹೆಚ್ಚು ಹೆಚ್ಚು ಕ್ರೀಡೆಗಳು ಆಯೋಜಿಸಿದರೆ ಕ್ರೀಡಾಪಡುಗಳಿಗೆ ಅವಕಾಶ ನೀಡಿದಂತಾಗುತ್ತದೆ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಭಾಗಣ್ಣ ಪೂಜಾರಿ, ಭೀಮಣ್ಣಗೌಡ ಮಾಲಿ ಪಾಟೀಲ್, ಭಾಗಣ್ಣ ಪೂಜಾರಿ ಶರಣು ಗೌಡ ದೊಡಮನಿ, ದೇವರೆಡ್ಡಿ ಹುಂಡೆಕಲï, ಮಲಣ್ಣ ಬಡಿಗೇರ, ಶರಣಪ್ಪ ಗೌಡೂರ, ಶರಬಣ್ಣ ಬಂದಳ್ಳಿ, ದೇವರಾಜ ಡಿಸಿ, ಭಾಗಣ್ಣ ಬಂದಳ್ಳಿ, ಈಶಪ್ಪ ಹಂಪಳ್ಳಿ, ದೇವೇಂದ್ರಪ್ಪ ಬಂದಳ್ಳಿ, ಸಿದ್ದು ಹಂಪಳ್ಳಿ, ಭಾಗಣ್ಣ ಗೌಡೂರ, ಅಂಬ್ರೇಶ ಹಂಪಳ್ಳಿ, ಮಲ್ಲಣ್ಣ ಬಂದಳ್ಳಿ, ಮಲ್ಲಣ್ಣ ಯಾದಗಿರಿ, ಸಾಬಣ್ಣ ಬಂದಳ್ಳಿ, ಶಿವಲಿಂಗ ಕಟೇಕಾರ್, ನಿಂಗಣ್ಣ ಕಾಟೇಕಾರ್, ಶರಬಣ್ಣ ಬಂದಳ್ಳಿ ಶಿವರಾಜ ಗೋಗಿ, ಭೀಮಣ್ಣ ಬಂದಳ್ಳಿ, ಸಿದ್ದಣ್ಣ ಅಲ್ಲೂರ ಇತರರಿದ್ದರು.


ಭಾರ ಎತ್ತುವಲ್ಲಿ ಸಿದ್ದಪ್ಪ ದ್ಯಾವಪುರ ಮತ್ತು ಕೈ ಕುಸ್ತಿಯಲ್ಲಿ ಮಾನಪ್ಪ ಯಾದಗಿರಿ ಅವರು ಗೆಲುವು ಸಾಧಿಸುವ ಮೂಲಕ ತಲಾ ನಾಲ್ಕು ತೊಲಾ ಬೆಳ್ಳೆ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net