ಸೋಲು ಗೆಲುವು ಸಮನಾಗಿ ಸ್ವೀಕರಿಸಿ

CMD 26-1A
ಚಿಮ್ಮಡ ಗ್ರಾಮದಲ್ಲಿ ನಡೆದ ಚಿಮ್ಮಡ ಕಬ್ಬಡ್ಡಿ ವೈಭವ ಮುಕ್ತ ಕಬ್ಬಡ್ಡಿ ಪಂದ್ಯಾವಳಿ ವೀಕ್ಷಿಸಲು ನೆರೆದ ಜನ ಸಮೂಹ.
Published on

ಬಾಗಲಕೋಟೆ: ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ ಪ್ರಕ್ರಿಯೆ. ಗೆಲುವಿಗೆ ಬೀಗದೆ, ಸೋಲಿಗೆ ದೃತಿಗೆಡದೆ ಅದನ್ನು ಸಮನಾಗಿ ಸ್ವೀಕರಿಸುವವನೇ ನಿಜವಾದ ಕ್ರೀಡಾಪಟು ಎಂದು ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.

ಚಿಮ್ಮಡ ಗ್ರಾಮದ ಓಂ ಪ್ರಭುಲಿಂಗೇಶ್ವರ ಯುವಕರ ಕ್ರೀಡಾ ಸಂಘ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಚಿಮ್ಮಡ ಕಬ್ಬಡ್ಡಿ ವೈಭವ ಮುಕ್ತ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಆಟದಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ. ಸೋತ ತಂಡ ಗೆದ್ದ ತಂಡಕ್ಕೆ ಅಭಿನಂದಿಸಿದಾಗಲೇ ಕ್ರೀಡೆಗೊಂದು ಬೆಲೆ ಬರುತ್ತದೆ ಎಂದರು.

ಸAಘದ ಅಧ್ಯಕ್ಷ ಪ್ರವೀಣ ಪೂಜಾರಿ ಮಾತನಾಡಿ, ಗ್ರಾಮೀಣ ಕ್ರೀಡೆಯಾಗಿರುವ ಕಬ್ಬಡಿ ಇಂದು ರಾಷ್ಟçಮಟ್ಟದಲ್ಲಿ ಬೆಳೆಯುತಿದ್ದು, ಇದಕ್ಕೆ ಗ್ರಾಮೀಣ ಬಾಗದ ಕ್ರೀಡಾ ಪೋಷಕರ ಪ್ರೋತ್ಸಾಹವೇ ಪ್ರಮುಖ ಕಾರಣ ಎಂದು ಹೇಳಿದರು.

ಕಾಂಗ್ರೆಸ್ ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಕವಟಿ, ಮುಖಂಡರಾದ ಮಹಾಂತೇಶ ಜಾಲಿಕಟ್ಟಿ, ಬಾಳಪ್ಪ ಗಡೆಪ್ಪನವರ, ಮಹಾಲಿಂಗ ಬಳಗಾರ, ನಾಗಪ್ಪ ಆಲಕನೂರ, ತುಕಾರಾಮ ದೊಡಮನಿ, ಶಿವಪ್ಪ ದಿನ್ನಿಮನಿ, ಮಹಾದೇವ ಅಥಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net