ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ

kpp sports
ಹರಿಹರಪುರದಲ್ಲಿ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಸವಿತಾ, ಅಶೋಕ್, ಬಿ.ಪಿ.ಚಿಂತನ್ ಬೆಳಗೊಳ, ರಾಘವೇಂದ್ರ ಇತರರಿದ್ದರು.
Published on

ಕೊಪ್ಪ: ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಹರಿಹರಪುರ ಅಭಿನವ ರಾಮಾನಂದ ಸರಸ್ವತಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳು, ಡಾ. ಬಿ.ಆರ್.ಅಂಬೇಡ್ಕರ್ ವಸತಿಶಾಲೆ ಆಶ್ರಯದಲ್ಲಿ ಆಯೋಜಿಸಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆಯಲ್ಲಿ ಮಾತನಾಡಿದರು.

ಕ್ರೀಡೆ ಜೀವನದಲ್ಲಿ ಅಮೂಲ್ಯ ಪಾತ್ರವಹಿಸುತ್ತದೆ. ಉದ್ಯೋಗ ಪಡೆಯುವಲ್ಲಿಯೂ ಅವಕಾಶ ಕಲ್ಪಿಸುತ್ತದೆ. ತಾಲೂಕಿನ ಹಲವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಮಾದರಿಯಾಗಿದೆ ಎಂದರು.

ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ. ಸ್ಪರ್ಧಾಳುಗಳು ಕ್ರೀಡಾ ಮನೋಭಾವನೆಯಲ್ಲಿ ಭಾಗವಹಿಸುವುದರಿಂದ ಉನ್ನತ ಸಾಧನೆಗೆ ದಾರಿಯಾಗುತ್ತದೆ ಎಂದು ತಿಳಿಸಿದರು.

ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಹರಿಹರಪುರ ಗ್ರಾಪಂ ಮಟ್ಟದ ಸ್ವಸಹಾಯ ಸಂಘಗಳ ಒಕ್ಕೂಟ ತಯಾರಿಸಿದ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಶಾಸಕರು ಉದ್ಘಾಟಿಸಿದರು.

ಕೆಡಿಪಿ ಸದಸ್ಯರಾದ ನಾರ್ವೆ ಅಶೋಕ್, ಬಿ.ಪಿ.ಚಿಂತನ್ ಬೆಳಗೊಳ, ಮೊಹಮ್ಮದ್ ಸಾಧಿಕ್, ರಾಜಶಂಕರ್, ಬಿಇಒ ರಾಘವೇಂದ್ರ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪಾಲಾಕ್ಷಮೂರ್ತಿ, ಗ್ರಾಪಂ ಜನಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net