ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ

IMG_20230824_163710
ಕೆಂಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಾಗೂರು ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಡಾ.ಮಹಮ್ಮದ್ ಇಬ್ರಾಹಿಂ, ಸಾವಿತ್ರಮ್ಮ, ಕೆ.ಎನ್.ಅನಿಲ್, ಜಯರಾಮ್, ದಿನೇಶ್, ಜಲೇಂದ್ರ ಇತರರು ಇದ್ದರು.
Published on

ಬಾಗೂರು: ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಗೆಲುವು, ಸೋಲನ್ನು ಸಮಾನ ಮನಸ್ಥಿತಿಯಲ್ಲಿ ಸ್ವೀಕರಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಕೆಂಬಾಳು ಸರ್ಕಾರಿ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಾಗೂರು ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಶ್ರಮಪಟ್ಟವರು ಗುರಿ ಮುಟ್ಟುತ್ತಾರೆ, ಸೋಮಾರಿಗಳಿಗೆ ಯಾವುದೇ ಸುಖವಿಲ್ಲ. ಹೀಗಾಗಿ ಎಲ್ಲ ಕ್ಷೇತ್ರಕ್ಕೂ ಪ್ರಾಮಾಣಿಕ ಪ್ರಯತ್ನ ಮುಖ್ಯ ಎಂದರು.

ಶಿಥಿಲಾವಸ್ಥೆಯಲ್ಲಿರುವ ತಾಲೂಕಿನ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿಗೆ ಸರ್ಕಾರದ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗಿದೆ ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಸಾವಿತ್ರಮ್ಮ ಚಿಕ್ಕೇಗೌಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ. ಎನ್.ಅನಿಲ್, ಡಾ.ಮಹಮ್ಮದ್ ಇಬ್ರಾಹಿಂ, ಶಿಕ್ಷಣ ಸಂಯೋಜಕ ಪ್ರದೀಪ್‌ರಾಜ್, ಬಿಆರ್‌ಪಿ ಶಾಂತರಾಜ್, ತಾಪಂ ಮಾಜಿ ಸದಸ್ಯ ಜೈರಾಮ್, ಗ್ರಾಪಂ ಸದಸ್ಯರಾದ ಗೌರೀಶ್, ಚಂದ್ರೇಗೌಡ, ಶಿಕ್ಷಕರಾದ ಕೆ.ಟಿ.ನಾಗರಾಜ್, ಎಚ್.ಡಿ.ದಿನೇಶ್, ಜಲೇಂದ್ರ, ಶಿವಮೂರ್ತಿ, ಬಿ.ಎಚ್.ಆನಂದ್, ಅಂಜನಾ ಮೂರ್ತಿ, ಕಲ್ಯಾಣ್‌ಕುಮಾರ್, ಬಿ.ಪಿ.ರಂಗನಾಥ್, ಎಲ್.ಬಿ.ರಾಜಶೇಖರ್, ವತ್ಸಲಾ, ರವೀಶ್, ಬೈರೇಗೌಡ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net