ಸೋಲಿನ ಹತಾಶೆಯಿಂದಾಗಿ ಅಪಪ್ರಚಾರ

1ravanduru (1)
ಪಿರಿಯಾಪಟ್ಟಣ ತಾಲೂಕಿನ ಆಯತನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿಪೂಜೆ ನೆರವೇರಿಸಿದರು. ಜಗದೀಶ್, ಮಲ್ಲಿಕಾರ್ಜುನ್, ರಾಮಚಂದ್ರೇಗೌಡ, ನಂಜಪ್ಪಾಚಾರ್, ಗಣೇಶ್, ಶಿವಯ್ಯ, ಜವರಯ್ಯ, ಸಣ್ಣೇಗೌಡ, ಬಸವರಾಜು ಇದ್ದರು.
Published on

ರಾವಂದೂರು: ಸೋಲಿನ ಹತಾಶೆಯಿಂದಾಗಿ ನನ್ನ ಹಾಗೂ ಪುತ್ರನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಆಯತನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ತಾಲೂಕಿನ ಮತದಾರರು ಅವರಿವರ ಮಾತಿಗೆ ಮರುಳಾಗಬಾರದು ಎಂದರು.

ಮುಖಂಡರಾದ ಜಗದೀಶ್, ಮಲ್ಲಿಕಾರ್ಜುನ್, ರಾಮಚಂದ್ರೇಗೌಡ, ನಂಜಪ್ಪಾಚಾರ್, ಗಣೇಶ್, ಶಿವಯ್ಯ, ಜವರಯ್ಯ, ಸಣ್ಣೇಗೌಡ, ಬಸವರಾಜು, ಮಹದೇವ್‌ನಾಯಕ್, ಶ್ರೀನಿವಾಸನಾಯಕ, ಸಿದ್ದಲಿಂಗಯ್ಯ, ಇಂಜಿನಿಯರ್ ಮಲ್ಲಿಕಾರ್ಜುನ್, ಆರ್‌ಐ ಶ್ರೀಧರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net