

ಕಮಲನಗರ: ಕಮಲನಗರ ಮತ್ತು ಔರಾದ್ ತಾಲೂಕಿನಲ್ಲಿ ೫೦೦ ಮೇಗಾವ್ಯಾಟ್ ಸೋಲಾರ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಉz್ದೆÃಶಿಸಿದ್ದು, ಇದಕ್ಕಾಗಿ ೨೦೦೦ ಎಕರೆ ಜಮೀನು ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರಡ್ಡಿ ನುಡಿದರು.
ಪಟ್ಟಣದ ಎಂ ಎ.ಬಿರಾದಾರ ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ಕಮಲನಗರ ಮತ್ತು ಔರಾದ್ ತಾಲೂಕಿನ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆ ಕುರಿತು ಬುಧವಾರ ಏರ್ಪಡಿಸಿದ್ದ ರೈತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಒಂದೇ ಕಡೆ ೨೦೦೦ ಎಕರೆ ಭೂಮಿ ನೀಡಿದರೆ ಒಳಿತಾಗಲಿದೆ ಎಂದರು.
ಡೊAಗರಗಾAವದ ಮಾಧವರಾವ ಶೇಷರಾವ ಮಾತನಾಡಿ, ಡೊಂಗರಗಾAವ, ಮಾಳೇಗಾಂವ ಗ್ರಾಮಗಳಲ್ಲಿ ಸಾಕಷ್ಟು ಜಮೀನು ಇದ್ದು, ರೈತರು ಕೊಡಲು ಸಿದ್ಧರಿz್ದÉÃವೆ ಎಂದರು.
ಸೋಲಾರ್ ಪಾರ್ಕ ಸ್ಥಾಪನೆಗೆ ರೈತರು ಅ.೫ರೊಳಗೆ ಸರ್ಕಾರಕ್ಕೆ ಅಗತ್ಯ ದಾಖಲೆ ನೀಡಬೇಕು. ೨೦೦೦ ಎಕರೆ ಭೂಮಿ ಲಭ್ಯವಾದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ರಾಜ್ಯ ನವೀಕರಿಸಬುಹುದಾದ ಇಂಧನ ಅಭಿವೃದ್ಧಿ ನಿಯಮಿತ ಪ್ರಧಾನ ವ್ಯವಸ್ಥಾಪಕ ನಾಗರಾಜ ತಿಳಿಸಿದರು.
ಚಿಮ್ಮೇಗಾಂವ, ಮಾಳೇಗಾಂವ, ಮುರ್ಕಿ, ಡೊಂಗರಗಾAವ, ಉಮ್ಮಾಪುರ, ಕಮಲನಗರ, ಮುರ್ಕಿ ಸೇರಿ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.
ಕೆಎಸ್‌ಪಿಡಿಸಿಎಲ್ ಪ್ರಧಾನ ವ್ಯವಸ್ಥಾಪಕ ಅಮರನಾಥ, ತಾಂತ್ರಿಕ ಅಧಿಕಾರಿ ಮಾಲಿನಿ ಸ್ವಾಮಿ, ತಹಸೀಲ್ದಾರ್ ಅಮೀತಕುಮಾರ ಕುಲಕರ್ಣಿ, ಔರಾದ್ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಇಒಗಳಾದ ಮಾಣಿಕರಾವ ಪಾಟೀಲ್, ಬೀರೇಂದ್ರ ಸಿಂಗ್, ಜೆಸ್ಕಾಂ ಕಾರ್ಯಪಾಲ ಅಭಿಯಂತರ ರಮೇಶ ಪಾಟೀಲ್, ಎಇಇ ರವಿ ಕಾರಬಾರಿ ಇತರಿದ್ದರು.