ಪಾವಗಡ : ತಾಲೂಕಿನ ತಿರುಮಣಿ ಸೋಲಾರ್ ಪಾರ್ಕ್ನ ಕೆಎಸ್ಪಿಡಿಸಿಎಲ್ ಕಚೇರಿ ಮುಂದೆ ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಬುಧವಾರ ಸೌರ ಪಾರ್ಕ್ ಗುತ್ತಿಗೆ ಕಾರ್ಮಿಕರು ಕಚೇರಿ ಕೆಲಸಕ್ಕೆ ಗೌರಾಗಿ ಪ್ರತಿಭಟನೆ ನಡೆಸಿದರು.
ಪಾವಗಡ ತಾಲೂಕು ಸೋಲಾರ್ ಉತ್ಪಾದನೆಯಲ್ಲಿ ವಿಶ್ವಖ್ಯಾತಿ ಪಡೆದಿದೆ. ಆದರೆ ಸರ್ಕಾರದ ಸ್ವಾಯತ ಸಂಸ್ಥೆಗಳಾದ ಕೆಎಸ್ಪಿಡಿಸಿಎಲ್, ಕ್ರೆಡೆಲ್ ಹಾಗೂ ನಿರ್ವಹಣಾ ಸಂಸ್ಥಯಲ್ಲಿ ಟೆಕ್ನಿಶಿಯನ್, ವಾಚ್ಮನ್, ಗಾರ್ಡ್, ಸಿಬ್ಬಂದಿ ಕೆಲಸ ನಿರ್ವಹಿಸುವ ಗುತ್ತಿಗೆ ಕಾರ್ಮಿಕರಿಗೆ ಸರ್ಕಾರದ ಆದೇಶದಂತೆ 22 ಸಾವಿರ ನೀಡಬೇಕಿದೆ. ಆದರೆ 17,500 ಸಂಬಳ ನೀಡಿ ಕಾರ್ಮಿಕರಿಗೆ ದಾರಿ ತಪ್ಪಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಸಂಬಳ ನೀಡುತ್ತಿಲ್ಲ, ಇಎಸ್ಐ ಹಾಗೂ ಪಿಎ್ ಹಣವೂ ಖಾತೆ ಜಮಾ ಆಗುತ್ತಿಲ್ಲ. ನಮ್ಮ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಇದ್ದ ಜಮೀನು ಸೋಲಾರ್ ಪಾರ್ಕ್ಗೆ ಕೊಟ್ಟು ಭಿೆ ಬೇಡುವಂತಾಗಿದೆ. ಆದ್ದರಿಂದ ಗುತ್ತಿಗೆ ಕಾರ್ಮಿಕರಿಗೆ ಇನ್ಶೂರೆನ್ಸ್ ಹಾಗೂ ಇಎಸ್.ಐ, ಪಿಎ್ ಹಾಗೂ ವಿಮೆ, ಭದ್ರತಾ ಪರಿಕರ, ವೇತನ ಹೆಚ್ಚಳ ಮಾಡಬೇಕೆಂದು ಪ್ರತಿಭಟನಾ ಸೌರ ಕಾರ್ಮಿಕರು ಒತ್ತಾಯಿಸಿದರು.
ಕೆಎಸ್ಪಿಡಿಸಿಎಲ್ ಕಚೇರಿಯಲ್ಲಿ ರಾತ್ರಿವೇಳೆ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಕನಿಷ್ಠ ಪ ಬ್ಯಾಟರಿ, ಲಾಠಿ, ಕಾಲಿಗೆ ಶೂ, ಸ್ವೇಟರ್ ಸೇರಿದಂತೆ ರೈನ್ ಕೋಟ್ ಸಹ ನೀಡಿಲ್ಲ. ಹಗಲು ರಾತ್ರಿ ಮಳೆ, ಚಳಿಯಲ್ಲೆ ಕೆಲಸ ನಿರ್ವಹಿಸಬೇಕಿದೆ. ಕೆಲಸ ಮಾಡುವ ವಾಚ್ಮನ್ ಸಿಬ್ಬಂದಿ ತನ್ನ ಕೆಲಸವಲ್ಲದ ಕೆಲಸ ಮಾಡುವಂತೆ ಎಇಇ ಮಹೇಶ್ ದಬ್ಬಾಳಿಕೆ ಮಾಡುತ್ತಿದ್ದಾರೆಂದು ಪ್ರತಿಭಟನಾ ಕಾರ್ಮಿಕರು ಆಕ್ರೋಶ ವ್ಯಕ್ತಪಿಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಎಸ್ಪಿಡಿಸಿಎಲ್ಸಿ ಇಒ ಶಿವಪ್ರಕಾಶ ಅವರು ಕಾರ್ಮಿಕರಿಂದ ಮನವಿ ಸ್ವೀಕರಿಸಿ ಸೊಲಾರ್ ಗುತ್ತಿಗೆ ಕಾರ್ಮಿಕರ ಸಮಸ್ಯೆಯನ್ನು ಗೌರವಯುತವಾಗಿ ಪರಿಗಣಿಸಿ ವಾರದೊಳಗೆ ವೇತನ ತಾರತಮ್ಯ, ಭದ್ರತಾ ಪರಿಕರ ಹಾಗೂ ವಿಮೆ ವಿವಿಧ ಸಮಸ್ಯೆ ಪರಿಹರಿಸಲಾಗುದು ಎಂದು ಭರವಸೆ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಕಾರ್ಮಿಕರು ಸಿಇಒ ಅವರ ಮೇಲೆ ಭರವಸೆ ಇಟ್ಟು ಪ್ರತಿಭಟನೆ ಕೈಬಿಟ್ಟರು.
ಸಿಬ್ಬಂದಿ ಶಿವಣ್ಣ, ಷಣ್ಮುಖ, ಆದರ್ಶ ಯಾದವ್, ಹರೀಶ್ನಾಯ್ಕ, ಲೋಹಿತ್, ಪ್ರಭಾಕರ, ಶಿವಣ್ಣ, ಮಂಜು, ಸುಬ್ಬು, ಲೋಹಿತ್, ನರೇಶ್, ಚಂದ್ರಶೇಖರ, ಮುರಳೀಧರ, ತಿರುಮಣಿ ಸುಬ್ಬರಾಯಪ್ಪ, ಗಂಗಾಧರ, ಮಾರಪ್ಪ, ಅಂಜಿನಪ್ಪ, ಮಹೇಶ್ ಸೇರಿ ಕ್ರೆಡಲ್, ಕೆಎಸ್ಪಿಡಿಸಿಎಲ್ನ ನೂರಾರು ಕಾರ್ಮಿಕರು ಇದ್ದರು.
17 ಪಾವಗಡ