ಸೋಲಾರ್ ದೀಪಗಳ ಅಳವಡಿಕೆಯಲ್ಲಿ ಅವ್ಯವಹಾರ

Pressmeet
Published on

ಚಿತ್ರದುರ್ಗ: ಇಂಗಳದಾಳ್ ಗ್ರಾಪಂ ವ್ಯಾಪ್ತಿಯಲ್ಲಿ ವರ್ಕ್ ಆರ್ಡರ್ ಇಲ್ಲದೆಯೇ 1 ಕೋಟಿ ರೂ. ವೆಚ್ಚದ ಸೋಲಾರ್ ದೀಪ ಅಳವಡಿಸಿದ್ದು, ಸಂಪೂರ್ಣ ಕಳಪೆ ಗುಣಮಟ್ಟದಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಬಾರದು. ಸೂಕ್ತ ತನಿಖೆಗೆ ಕ್ರಮ ವಹಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ರಾಘವೇಂದ್ರ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಎಂಎಲ್ಸಿಯಾಗಿದ್ದ ವೈ.ಎ.ನಾರಾಯಣಸ್ವಾಮಿ ಅವರು ಎಸ್ಸಿ ಕಾಲಾನಿಗಳ ಮೂಲಸೌಕರ್ಯಕ್ಕಾಗಿ 1 ಕೋಟಿ ರೂ. ಅನುದಾನ ನೀಡಿದ್ದರು. ಆದರೀಗ ಸಂಪೂರ್ಣ ದುರ್ಬಳಕೆಯಾಗಿದೆ ಎಂದು ದೂರಿದರು.

ಸರ್ಕಾರದ ನಿಯಮ ಗಾಳಿಗೆ ತೂರಲಾಗಿದೆ. ಎಸ್ಸಿ ಕಾಲಾನಿಯಲ್ಲದ ಕಡೆ ಕೂಡ ಅಳವಡಿಸಿದ್ದು, ದುರುಪಯೋಗದ ಉದ್ದೇಶವಿದೆ. ಗುಣಮಟ್ಟವೂ ಇಲ್ಲ. ಹೀಗಾಗಿ ಹಣ ಬಿಡುಗಡೆ ಮಾಡದೆ, ಹೊಸ ಟೆಂಡರ್ ಕರೆಯಬೇಕು. ಈಗಾಗಲೇ ಮಂಜೂರಾದ ಗುತ್ತಿಗೆದಾರರ ಲೈಸನ್ಸ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ನಾಗಭೂಷಣ್ ಮಾತನಾಡಿ, ಈ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲೂ ವಿಪರೀತ ಭ್ರಷ್ಟಾಚಾರವಾಗಿದೆ. ಕಾಮಗಾರಿ ನಡೆದ ಕಡೆಗಳಲ್ಲೇ ಮತ್ತೊಮ್ಮೆ ಮಾಡುತ್ತಿದ್ದು, ಪರಿಶೀಲಿಸದೆ ಅಧಿಕಾರಿಗಳು ಹಣ ಬಿಡುಗಡೆಗೆ ಮುಂದಾಗಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net