ಹಾಸನ ; ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೊಯ್ಸಳ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮೆಡಿಕಲ್ ರಾಮೇಗೌಡ ಹೇಳಿದರು.
ಚನ್ನರಾಯಪಟ್ಟಣ ತಾಲೂಕಿನ ದಿಡಗ ಗ್ರಾಮದ ಹೊಯ್ಸಳ ವಿದ್ಯಾಸಂಸ್ಥೆಯ ಆವರಣದಲ್ಲಿ ವಿಪ್ರೋ ಸಂಸ್ಥೆ, ಶ್ರೀ ಮಾರುತಿ ಏಜನ್ಸೀಸ್, ಅರುಣೋದಯ ಪ್ರೌಢಶಾಲೆ ಹಾಗೂ ಹೊಯ್ಸಳ ವಿದ್ಯಾಸಂಸ್ಥೆ
ಸಹಯೋಗದಲ್ಲಿ ಪೋಷಕರು ಹಾಗೂ ಆಸಕ್ತ ಮಕ್ಕಳಿಗೆ ಸೋಮವಾರ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಗೆಲುವು ಸಂತಸ ನೀಡಿದರೆ, ಸೋಲು ಸಾವಿರ ಅನುಭವ ನೀಡುತ್ತದೆ. ಸೋಲು ಕಂಡಾಗ ಹೆಜ್ಜೆಯನ್ನು ಹಿಂದಿಡದೆ ಗೆಲುವಿಗೆ ಮರಳಿ ಯತ್ನಿಸಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದರೆ ಮಾತ್ರ ಯಶಸ್ಸಿನ ಗುರಿ ತಲುಪಲು ಸಾಧ್ಯ ಎಂದರು. ದಿಡಗ, ನರಿಹಳ್ಳಿ, ಕನುವನಘಟ್ಟ, ಡಿ.ತುಮಕೂರು, ಕಾಮನಘಟ್ಟ ಹಾಗೂ ಬಿದರಕೆರೆ ಸೇರಿದಂತೆ ವಿವಿಧ ಗ್ರಾಮಗಳಿಂದ 50ಕ್ಕೂ ಹೆಚ್ಚು ಪೋಷಕರು ಹಾಗೂ 25 ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ಮೆಡಿಕಲ್ ರಾಮೇಗೌಡ ವಿತರಿಸಿದರು. ಡಿ.ತುಮಕೂರು ಗ್ರಾಮದ ಮಾರುತಿ ಏಜೆನ್ಸೀಸ್ ಮಾಲೀಕ ಟಿ.ಆರ್.ರಂಗಸ್ವಾಮಿ, ಮುಖ್ಯಶಿಕ್ಷಕ ಬಿ.ಎಚ್.ನಂದೀಶ್, ವಿಪ್ರೋ ಸಂಸ್ಥೆಯ ಅಧಿಕಾರಿ ವಿನಯ್, ಸಹ ಶಿಕ್ಷಕರಾದ ರವೀಶ, ನಾಗೇಶ್, ಕುಮಾರ್, ಪಾಪೇಶ್, ಸುಮ, ಭಾರತಿ, ಸೌಮ್ಯ, ಶೋಭ ಹಾಗೂ ಇತರರು ಇದ್ದರು. ಫೋಟೋ ಶೀರ್ಷಿಕೆ: