ಸೋಯಾ ಖರೀದಿಗೆ ಚಾಲನೆ

navalspur
Published on

ಬೀದರ್: ತಾಲೂಕಿನ ನವಲಸಪುರ ಗ್ರಾಮದಲ್ಲಿ ರಿಲಾಯನ್ಸ್ ಫೌಂಡೇಷನ್ ಹಾಗೂ ಬೀದರ್ ಕೃಷಿ ಉತ್ಪಾದಕ ಕಂಪನಿಯಿಂದ ಸೋಯಾಬೀನ್ ಖರೀದಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಕೃಷಿ ಉತ್ಪಾದಕರ ಕಂಪನಿ ನಿರ್ದೇಶಕ ದೇವಿದಾಸರಾವ್ ಪಾಟೀಲ್ ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಸೋಯಾಬೀನ್ ಧಾನ್ಯಗಳನ್ನು ಖರೀದಿ ಕೇಂದ್ರಕ್ಕೆ ತಂದು ಉತ್ತಮ ದರ ಪಡೆಯಬೇಕು. ಮಾರುಕಟ್ಟೆಗಿಂತ ಉತ್ತಮ ಬೆಲೆ ಖರೀದಿ ಕೇಂದ್ರದಲ್ಲಿ ಕೊಡಲಾಗುತ್ತಿದೆ ಎಂದರು.

ರೈತರು ಸೋಯಾಬೀನ್ ಜತೆಗೆ ಆಧಾರ್ ಕಾಡ್೯ ಲಿಂಕ್ ಇರುವ ಬ್ಯಾಂಕ್ ಪಾಸ್ ಬುಕ್ ತಂದು ನೇರವಾಗಿ ದಳ್ಳಾಳಿಗಳ ಯಾವುದೇ ರೀತಿಯ ಕಾಟ ಹಾಗೂ ಹಮಾಲಿ ಖರ್ಚು ಇಲ್ಲದೆ ನಿಗದಿತ ಮತ್ತು ಉತ್ತಮ ದರಕ್ಕೆ ಧಾನ್ಯಗಳನ್ನು ಮಾರಾಟ ಮಾಡಿ ಎಂದು ಸಲಹೆ ನೀಡಿದರು. ರಿಲಾಯನ್ಸ್ ಸಹಾಯಕ ಯೋಜನಾಧಿಕಾರಿ ಸಂಗಪ್ಪ ಅತಿವಾಳ, ಕಿಶನರಾವ್ ಇತರರಿದ್ದರು.

ರೈತರು ನೇರವಾಗಿ ಬಂದು ಸೋಯಾಬೀನ್ ಧಾನ್ಯಗಳ ಸ್ಯಾಂಪಲ್ ತೋರಿಸಿ ಗುಣಮಟ್ಟ ಹಾಗೂ ನಿಗದಿತ ದರದ ಬಗ್ಗೆ ಮಾಹಿತಿ ಪಡೆದು, ಎಷ್ಟೂ ಕ್ವಿಂಟಾಲ್ ಬೇಕಾದರು ಮಿತಿಯಿಲ್ಲದೆ ಮಾರಾಟ ಮಾಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಲಾಭ ಪಡೆಯಬೇಕು.| ಸಂಗಪ್ಪ ಅತಿವಾಳರಿಲಾಯನ್ಸ್ ಸಹಾಯಕ ಯೋಜನಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net