ಸೋಯಾ ಅವರೆ ಜಿಲ್ಲಾಧಿಕಾರಿ ಕಚೇರಿಗೆ ತಂದು ಆಕ್ರೋಶ

25dvk 7B
Published on

ಸೋಯಾ ಅವರೆ ಖರೀದಿಯಲ್ಲಿ ದಲ್ಲಾಳಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೋಯಾ ಅವರೇ ಚೀಲ ತುಂಬಿದ ಟ್ರಾೃಕ್ಟರ್ ಸಮೇತ ಗುರುವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಪ್ರತಿಭಟಿಸಿದ್ದಾರೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಭಾಗದ ರೈತರು, ತಮ್ಮ ಸೋಯಾ ಅವರೆಗೆ ಸರಿಯಾದ ಬೆಲೆಸಿಗುತ್ತಿಲ್ಲ ಎಂದು

ಗೊಂಡು, ರೈತ ರಾಮನಗೌಡ ಪಾಟೀಲ ಎಂಬುವವರು ಮಾರುಕಟ್ಟೆಗೆ ತಂದಿದ್ದ ಟ್ರಾೃಕ್ಟರ್‌ನ್ನೇ ಡಿಸಿ ಕಚೇರಿಗೆ ತಂದು ತಮ್ಮ ನೋವು ತೋಡಿಕೊಂಡರು.

ದಲ್ಲಾಳಿಗಳು ಒಂದು ಕ್ವಿಂಟಾಲ್ ಸೋಯಾ ಅವರೆಗೆ 30 ಕೆಜಿ ಕಮೀಷನ್ ಕೇಳುತ್ತಿದ್ದಾರೆ. ಸದ್ಯ ಖರೀದಿ ಕೇಂದ್ರಗಳು ಆರಂಭಗೊಂಡಿಲ್ಲ. ಪದೇ ಪದೇ ಮಳೆ ಬರುತ್ತಿರುವುದರಿಂದ ಕಾಳು ಇಟ್ಟುಕೊಳ್ಳುವ ಸ್ಥಿತಿಯೂ ಇಲ್ಲ. ಹೀಗಾಗಿ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಬೇಗ ಮಾರಬೇಕಾದ ಸ್ಥಿತಿ ಇದ್ದು, ಇದನ್ನು ದಲ್ಲಾಳಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರ ಶೀಘ್ರವೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net