

ಬೈಲಹೊಂಗಲ: ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಗೆ ಸೆ.10ರಂದು ಮತದಾನ ಜರುಗಲಿದೆ.
ಸುಮಾರು 600 ಹಳ್ಳಿಗಳ 29,149 ಮತದಾರರು ಮತದಾನ ಮಾಡಲಿದ್ದಾರೆ. ಮತದಾನಕ್ಕೆ ಕಾರ್ಖಾನೆ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಬೈಲಹೊಂಗಲ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ (ಎಂಎಸ್‌ಎಸ್‌ಆರ್) ಪ್ರೌಢಶಾಲೆ, ಕೆ.ಆರ್.ಸಿ.ಇ.ಎಸ್. ಆಂಗ್ಲ ಮಾಧ್ಯಮ ಶಾಲೆ, ಎಂ.ಕೆ.ಸಿ.ಆರ್. ಬಾಲಕಿಯರ ಪ್ರೌಢಶಾಲೆಗಳಲ್ಲಿ ಮತದಾನಕ್ಕೆ ಸಿದ್ಧತೆ ಮಾಡಲಾಗಿದೆ.
ಬಾಳೇಕುಂದರಗಿ ಸಹಕಾರ ಪ್ಯಾನಲ್, ಶ್ರೀ ಸೋಮೇಶ್ವರ ರೈತರ ಅಭಿವೃದ್ದಿ ಸಹಕಾರ ಪ್ಯಾನಲ್, ಕಿಸಾನ್ ಸಹಕಾರ ಪ್ಯಾನಲ್ ಅಭ್ಯರ್ಥಿಗಳು ಸೇರಿ ಒಟ್ಟು 53 ಮಂದಿ ಕಣದಲ್ಲಿದ್ದಾರೆ. ಮತದಾನದ ನಂತರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುವುದು. ಡಿವೈಎಸ್‌ಪಿ ರವಿ ನಾಯ್ಕ ನೇತೃತ್ವದಲ್ಲಿ 1 ಡಿಎಸ್‌ಪಿ, 5 ಸಿಪಿಐ, 8 ಪಿಎಸ್‌ಐ, 22 ಎಎಸ್‌ಐ, 300 ಪೊಲೀಸರು, 2 ಕೆಎಸ್‌ಆರ‌್ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.