ಸೋಮಶೇಖರ ರೆಡ್ಡಿ ಬಂಧನಕ್ಕೆ ಆಗ್ರಹ

IMG-20200106-WA0058.jpg
Published on

*ಡಿಸಿ, ಎಸ್ಪಿಗೆ ಕಾಂಗ್ರೆಸ್ ಮುಖಂಡರಿಂದ ಒತ್ತಾಯ

ವಿಜಯವಾಣಿ ಸುದ್ದಿಜಾಲ ಬಳ್ಳಾರಿ

ವಿವಾದಾತ್ಮಕ ಹೇಳಿಕ್ಕೆ ಕೊಟ್ಟಿದ್ದ ಶಾಸಕ ಜಿ.ಸೋಮಶೇಖರರೆಡ್ಡಿ ಬಂಧಿಸುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಎಸ್ಪಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾಗೆ ದೂರು ಸಲ್ಲಿಸಿ ಒತ್ತಾಯಿಸಿದರು.

ನಾವೆಲ್ಲ ಸಹೋದರರಂತೆ ಇದ್ದೇವೆ, ರೆಡ್ಡಿ ಈಗ ಕಿಡಿ ಹೊತ್ತಿಸಿದ್ದಾರೆ.ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಕೂಡಲೇ ಸೋಮಶೇಖರ ರೆಡ್ಡಿ ಬಂಧಿಸುವಂತೆ ವಿಪಸದಸ್ಯ ಕೆ.ಸಿ ಕೊಂಡಯ್ಯ ನೇತೃತ್ವದಲ್ಲಿ ಡಿಸಿ, ಎಸ್ಪಿ ಭೇಟಿ ಮಾಡಿ ಒತ್ತಾಯಿಸಿದರು.

ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಮುಖಂಡರಾದ ಆನಂಜನೇಯಲು, ವೆಂಕಟೇಶ ಸೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net