ಸೋಮವಾರಪೇಟೆಯಲ್ಲಿ ನಾಡಪ್ರಭು ಜಯಂತಿ

27spt1
Published on

ಸೋಮವಾರಪೇಟೆ: ನಾಡಪ್ರಭು ಕೆಂಪೇಗೌಡರು ಮಾನವತಾವಾದಿ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಆದರ್ಶ ಹೊಂದಿದ್ದರು. ಅವರ ಆದರ್ಶ ಸರ್ವಕಾಲೀಕ ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಅಭಿಪ್ರಾಯಪಟ್ಟರು.


ತಾಲೂಕು ಆಡಳಿತದ ವತಿಯಿಂದ ತಾಲೂಕು ಆಡಳಿತಸೌಧ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಸಭೆಯಲ್ಲಿ ಮಾತನಾಡಿದರು.


1537ರಲ್ಲಿ ಕೆಂಪೇಗೌಡರ ಯತ್ನದಿಂದ ಬೆಂಗಳೂರು ರೂಪ ತಳೆಯಿತು. ಅವರು ಸಾಕಷ್ಟು ಕೆರೆಗಳನ್ನು ಕಟ್ಟಿಸಿದರು. ಕೃಷಿಗೆ ಹೆಚ್ಚಿನ ಅದ್ಯತೆ ನೀಡಿದರು. ಯಲಹಂಕ ನಾಡ ಪ್ರಭುಗಳಾಗಿ 46 ವರ್ಷಗಳ ಕಾಲ ಆಡಳಿತ ನಡೆಸಿ, ನಂತರ ಯಲಹಂಕ ತೊರೆದು ಬೆಂಗಳೂರು ಕೋಟೆಯನ್ನು ನಿರ್ಮಿಸಿದರು. ಬೆಂಗಳೂರು ಪೇಟೆ ಪ್ರಸ್ತುತ ಬೆಂಗಳೂರು ನಗರವಾಗಿದ್ದು, ಪ್ರಪಂಚವನ್ನೇ ತನ್ನತ್ತ ಸೆಳೆಯುತ್ತಿರುವ ಬೃಹತ್ ನಗರವಾಗಿದೆ ಎಂದು ಹೇಳಿದರು.


ಅತಿಥಿಗಳು ನಾಡಪ್ರಭುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ಪಿ.ಕೆ.ಚಂದ್ರು, ಶಿರಸ್ತೇದಾರ್ ಲೋಹಿತ್‌ಕುಮಾರ್, ಎಫ್‌ಡಿಎ ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net