ಸೋಮನಹಳ್ಳಿ ಗ್ರಾಪಂಗೆ ನೂತನ ಕಟ್ಟಡ

pnh gp tp
ಸೋಮನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಗ್ರಾಪಂ ಅಧ್ಯಕ್ಷ ಎಂ.ಸಿ.ಸತೀಶ್ ನಾಯ್ಕ, ಲೀಲಾವತಿ, ಎಸ್.ಡಿ.ಲಿಂಗರಾಜು, ಎ.ಜೆ.ಸಂತೋಷ್, ತನುಜಾ ಇತರರಿದ್ದರು.
Published on

ಪಂಚನಹಳ್ಳಿ: ಗ್ರಾಮ ಪಂಚಾಯಿತಿ ಅನುದಾನದ ಜತೆಗೆ ಶಾಸಕರ ಸಹಕಾರ ಪಡೆದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಸೋಮನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಸಿ.ಸತೀಶ್ ನಾಯ್ಕ ಹೇಳಿದರು.

ಶುಕ್ರವಾರ ಸೋಮನಹಳ್ಳಿ ಮತ್ತು ಮಲ್ಲಾಘಟ್ಟ ಗ್ರಾಮಗಳಲ್ಲಿ 55 ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸೋಮನಹಳ್ಳಿಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಮಲ್ಲಾಘಟ್ಟ ಗ್ರಾಮದಲ್ಲಿ 12 ಲಕ್ಷ ವೆಚ್ಚದಲ್ಲಿ ಶುದ್ಧಂಗಾ ಘಟಕ ಮತ್ತು 3 ಲಕ್ಷ ವೆಚ್ಚದಲ್ಲಿ ಶ್ರೀ ಮಾತಂಗಮ್ಮ ದೇವಾಲಯವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಹೆಚ್ಚಿನ ಅನುದಾನದ ಅವಶ್ಯಕತೆ ಬಿದ್ದರೆ ಶಾಸಕರೊಂದಿಗೆ ಚರ್ಚಿಸಿ ಹಣ ತರಲಾಗುವುದು ಎಂದು ಹೇಳಿದರು.

ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೋಡಿಹಳ್ಳಿ-ಸೋಮನಹಳ್ಳಿ ತಾಂಡ ರಸ್ತೆ ಅಭಿವೃದ್ಧಿಗೆ ಶಾಸಕರು 50 ಲಕ್ಷ ಅನುದಾನ ನೀಡಿದ್ದರು. ರಸ್ತೆ ಅಭಿವೃದ್ಧಿಪಡಿಸಿ ಉದ್ಘಾಟಿಸಲಾಗಿದೆ. ಗ್ರಾಪಂ ವ್ಯಾಪ್ತಿಯ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಅನುದಾನ ನೀಡುವ ಮೂಲಕ ಸಹಕರಿಸಿದ್ದಾರೆ ಎಂದು ತಿಳಿಸಿದರು.

ಉಪಾಧ್ಯಕ್ಷೆ ಲೀಲಾವತಿ ಸುರೇಂದ್ರ ಮಾತನಾಡಿ, ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಾಮಗಾರಿಗಳಿಗೆ ಅನುದಾನ ನೀಡಿದ ಶಾಸಕರನ್ನು ಸೋಮನಹಳ್ಳಿ ವ್ಯಾಪ್ತಿಯ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಪಿಡಿಒ ತನುಜಾ, ಸದಸ್ಯರಾದ ಎಸ್.ಡಿ.ಲಿಂಗರಾಜು, ಎ.ಜೆ.ಸಂತೋಷ್, ಶಶಿಧರ, ಎಸ್.ಜೆ.ಅರುಣಾ, ರತ್ನಿಬಾಯಿ, ಶೋಭಾರಾಣಿ, ಲತಾ ದೇವರಾಜು, ಬಿ.ಸಿ.ನಾಗರಾಜು, ಗ್ರಾಪಂ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net