ಸೋಮನಳ್ಳಮ್ಮದೇವಿ ದರ್ಶನ ಪಡೆದ ಎಚ್‌ಡಿಕೆ

21 NMG 02 (4)
Published on

ನಾಗಮಂಗಲ: ತಾಲೂಕಿನ ಶಕ್ತಿದೇವತೆ ಶ್ರೀ ಸೋಮನಹಳ್ಳಮ್ಮ ದೇವಿಯ ದೇವಾಲಯಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಎಚ್‌ಡಿಕೆ ಹೊಣಕೆರೆ ಹೋಬಳಿಯ ಸೋಮನಹಳ್ಳಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಅರ್ಚನೆ ಮಾಡಿಸಿದರು. ನಂತರ ದೇವಾಲಯದ ಬಳಿ ಸೇರಿದ್ದ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸುರೇಶ್‌ಗೌಡ ಸೋಲಿನ ಬಗ್ಗೆ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು. ಕಾರ್ಯಕರ್ತರು ಎದೆಗುಂದುವುದು ಬೇಡ. ಜೆಡಿಎಸ್ ಪಕ್ಷ ನಿಮ್ಮಂತ ಲಕ್ಷಾಂತರ ಕಾರ್ಯಕರ್ತರಿಂದ ಬೆಳೆದು ಬಂದಿದೆ. ಕಾರ್ಯಕರ್ತರಿರುವವರೆಗೆ ನಮ್ಮ ಪಕ್ಷ ಸದೃಢವಾಗಿರಲಿದೆ ಎಂದರು.


ಈ ಸಂದರ್ಭ ನೂರಾರು ಕಾರ್ಯಕರ್ತರು ಮಳೆಯಲ್ಲಿಯೇ ಸೆಲ್ಫಿಗೆ ಮುಗಿಬಿದ್ದರು. ತಾಲೂಕಿನ ದೇವಲಾಪುರ ಹ್ಯಾಂಡ್‌ಪೋಸ್ಟ್, ಗುಡ್ಡೇನಹಳ್ಳಿ ಕ್ರಾಸ್ ಹಾಗೂ ಬ್ರಹ್ಮದೇವರಹಳ್ಳಿ ಸೇರಿದಂತೆ ಹಲವೆಡೆ ಅಭಿನಂದಿಸಿದರು.


ಈಟೈಮಲ್ಲಿ ರಾಜೀನಾಮೆ ಕೊಡಬೇಕಿತ್ತಾ?: ಮನ್ಮುಲ್ ನಿರ್ದೇಶಕ ಕೋಟಿ ರವಿ, ಜಿಲ್ಲೆಯಲ್ಲಿ ಇದ್ದದ್ದು ಒಂದು ಮನ್ಮುಲ್. ಅದು ಇಲ್ಲದಂತೆ ಆಯ್ತಲ್ಲ ಅಣ್ಣ ಎಂದು ಎಚ್‌ಡಿಕೆ ಬಳಿ ಹೇಳಿದರು.


ಇದಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ ಈ ಟೈಮ್‌ನಲ್ಲಿ ರಾಜೀನಾಮೆ ಕೊಡಬೇಕಿತ್ತಾ. ಮಾಡಬೇಕಾದಾಗ ಮಾಡಲಿಲ್ಲ. ಈಗ ರಾಜೀನಾಮೆ ಕೊಟ್ಟಿದ್ದಾರೆ. ಏನಾದರೂ ಒಂದು ಮಾಡೋಣ ಬಾರಣ್ಣ ಎಂದರು.
ಮಾಜಿ ಶಾಸಕ ಸುರೇಶ್‌ಗೌಡ, ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು, ಮುಖಂಡರಾದ ಪುಟ್ಟಸ್ವಾಮಿ, ಯದುರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net