ಸೋನಾಳ ಗ್ರಾಮದ ಶಾಲೆ ಪಕ್ಕದ ನೀರಿನ ಟ್ಯಾಂಕ್ ಶಿಥಿಲ

Capture3
Published on

ಕಮಲನಗರ(ಗ್ರಾ): ಸೋನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿರುವ ಕುಡಿಯುವ ನೀರಿನ ಎರಡು ಟ್ಯಾಂಕ್ಗಳು ಶಿಥಿಲಗೊಂಡಿದ್ದು, ವಿದ್ಯಾಥರ್ಿಗಳು ಆತಂಕದಲ್ಲಿ ಪಾಠ ಕೇಳುವಂತಾಗಿದೆ. ಜನರು ಕೂಡ ಜೀವ ಭಯದ ಮಧ್ಯೆ ಓಡಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನೀರಿನ ಟ್ಯಾಂಕ್ಗಳನ್ನು ಸುಮಾರು 60 ವರ್ಷಗಳ ಹಿಂದೆ ಜಲನಿರ್ಮಲ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ. ಒಂದು 40 ಸಾವಿರ ಮತ್ತು ಇನ್ನೊಂದು 50 ಸಾವಿರ ಲೀಟರ್ ನೀರು ಸಂಗ್ರಹ ಸಾಮಥ್ರ್ಯ ಹೊಂದಿವೆ. ಇವುಗಳ ಪಿಲ್ಲರ್ ಮತ್ತು ಮೆಟ್ಟಿಲುಗಳ ಸಿಮೆಂಟ್ ಉದುರಿ ಹೋಗಿದ್ದು, ಕಬ್ಬಿಣದ ರಾಡ್ಗಳು ಹೊರಗೆ ಕಾಣುತ್ತಿವೆ. ಯಾವಾಗ ಬೇಕಾದರೂ ಉರುಳಿ ಬೀಳಬಹುದು.

ಗ್ರಾಪಂ ಕಚೇರಿ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ಟ್ಯಾಂಕ್ಗಳ ಮರ್ಗವಾಗಿಯೇ ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ಇವು ಉರುಳಿದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಅಪಾಯ ಸಂಭವಿಸುವ ಮುನ್ನ ಟ್ಯಾಂಕ್ಗಳನ್ನು ನೆಲಸಮಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಟ್ಯಾಂಕ್ ನೆಲಸಮಗೊಳಿಸಿ ಗ್ರಾಮಸ್ಥರಿಗೆ ಸಮರ್ಪಕ ನೀರು ಪೂರೈಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಉದ್ಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು. ಹೊಸ ಟ್ಯಾಂಕ್ ನಿಮರ್ಾಣಕ್ಕೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ರು ದಶಕದ ಹಿಂದೆ ನಿರ್ಮಾಣವಾದ ನೀರಿನ ಟ್ಯಾಂಕ್ಗಳು ಶಿಥಿಲಗೊಂಡಿವೆ. ಆದರೆ ಇವುಗಳಲ್ಲಿಯೇ ನೀರು ಸಂಗ್ರಹ ಮಾಡಿ ಗ್ರಾಮದ ವಿವಿಧ ಬಡಾವಣೆಗಳಿಗೆ ನಲ್ಲಿ ಮೂಲಕ ಸರಬರಾಜು ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಾಣ ಹಾನಿ ಸಂಭವಿಸುವ ಮುನ್ನ ಟ್ಯಾಂಕ್ ನೆಲಸಮಗೊಳಿಸಿ ಹೊಸ ಟ್ಯಾಂಕ್ ನಿರ್ಮಿಸಬೇಕು.
| ಅಂಕುಶ ಹಣಮಶೆಟ್ಟೆ, ಗ್ರಾಪಂ ಮಾಜಿ ಸದಸ್ಯ, ಸೋನಾಳ

ಶಿಥಿಲ ನೀರಿನ ಟ್ಯಾಂಕ್ಗಳನ್ನು ನೆಲಸಮಗೊಳಿಸುವ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಯಾವುದೇ ಆದೇಶ ಬಂದಿಲ್ಲ. ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಶೀಘ್ರದಲ್ಲಿ ಟ್ಯಾಂಕ್ ನೆಲಸಮಗೊಳಿಸಲಾಗುವುದು.
| ಬಾಬುರಾವ, ಪಿಡಿಒ, ಸೋನಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net