ಸೋಂಕು ಹೆಚ್ಚಾಗುವ ಭೀತಿ: ನಿರ್ಭೀತವಾಗಿ ಗುಂಪುಗೂಡುವ ಜನ

2
Published on

ಮೂರ್ತಿ ಟಿ.ಸಿ.ಎಸ್​.ತಿಪಟೂರು

ಕರೊನಾದ ಓಮಿಕ್ರಾನ್​ ತಳಿ (ಬಿಎ&4) ಅಷ್ಟೇನೂ ಸೌಮ್ಯವಲ್ಲ. ಹೆಚ್ಚಿನ ಪ್ರಾಣಹಾನಿ ಮಾಡುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಗಳು ಎಚ್ಚರಿಕೆ ನೀಡಿವೆ. ಆದರೆ ಜನರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಕರೊನಾ ಮಾರ್ಗಸೂಚಿಯನ್ನು ಸಂಪೂರ್ಣ ಗಾಳಿಗೆ ತೂರಿ ನಿರ್ಭೀತವಾಗಿ ಓಡಾಡಿಕೊಂಡಿದ್ದಾರೆ. ಇದರಿಂದಾಗಿ ಸೋಂಕು ಹೆಚ್ಚಾಗುವ ಆತಂಕ ಮೂಡಿದೆ.

ಮೂರನೇ ಅಲೆ ರೂಪದಲ್ಲಿ ಬಂದಿದ್ದ ಓಮಿಕ್ರಾನ್​ ತಳಿಯಿಂದ ಹೆಚ್ಚಿನ ಜೀವಹಾನಿ ಸಂಭವಿಸದೇ ಹೋಗಿದ್ದು, ಜನರ ರ್ನಿಲಕ್ಷ$್ಯಕ್ಕೆ ಕಾರಣವಾಗಿದೆ. ಜತೆಗೆ ಸರ್ಕಾರ ಕೂಡ ಯಾವುದೇ ಕಠಿಣ ಕ್ರಮಗಳನ್ನು ಜಾರಿಗೊಳಿಸದೇ ಇರುವುದು ಜನರ ರ್ನಿಲಕ್ಷ$್ಯತನಕ್ಕೆ ಇಂಬು ಕೊಟ್ಟಂತಾಗಿದೆ. ಇದರಿಂದಾಗಿ ಮದುವೆ ಮನೆ, ಸಭೆ&ಸಮಾರಂಭಗಳಲ್ಲಿ ಜನರು ಕನಿಷ್ಠ ಮಾಸ್ಕ್​ ಕೂಡ ಧರಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡಲಾರಂಭಿಸಿದ್ದಾರೆ.

ಹೆಚ್ಚುತ್ತಿರುವ ಪಾಸಿಟಿವಿಟಿ ದರ: ದೇಶಾದ್ಯಂತ ವ್ಯಾಪಿಸುತ್ತಿರುವ ಕರೊನಾದ ನಾಲ್ಕನೇ ಅಲೆ ದಿನೇದಿನೆ ವೇಗ ಪಡೆದುಕೊಳ್ಳುತ್ತಿದೆ. ಕಳೆದ ವಾರ ದೇಶದಲ್ಲಿದ್ದ 0.56 ಪಾಸಿಟಿವಿಟಿ ದರ ಈಗ 0.78ಕ್ಕೆ ಹೆಚ್ಚಳವಾಗಿದೆ. ಇತ್ತೀಚಿನ ವರದಿ ಪ್ರಕಾರ 20 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ಹರಡುವಿಕೆ ಪ್ರಮಾಣದಲ್ಲಿ ಕರ್ನಾಟಕ ಸದ್ಯ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಲಸಿಕೆ ಪರಿಣಾಮ ಮೀರಬಲ್ಲದು: ಕರೊನಾದ 2ನೇ ಅಲೆ ಸಂದರ್ಭದಲ್ಲಿ ಸೋಂಕು ಉಂಟು ಮಾಡುತ್ತಿದ್ದ ಡೆಲ್ಟಾ ಸೂಕ್ಷಾ$್ಮಣು ಶ್ವಾಸಕೋಶಕ್ಕೆ ಹಾನಿ ಮಾಡಿತ್ತು. ಓಮಿಕ್ರಾನ್​ನ ಹೊಸ ತಳಿ ಶೀತದಂಥ ಸಾಮಾನ್ಯ ಗುಣಲಕ್ಷ$ಣಗಳನ್ನು ಹೊಂದಿರುತ್ತದೆ ಎಂಬುದು ಸುಳ್ಳೆಂಬುದು ಸಾಬೀತಾಗಿದೆ. ಈ ಹೊಸ ತಳಿ ಹಿಂದಿನ ತಳಿಗಳಷ್ಟೇ ಬಲಶಾಲಿಯಾಗಿದ್ದು, ಲಸಿಕೆಯ ರೋಗನಿರೋಧಕಶಕ್ತಿಯನ್ನೂ ಮೀರಿ ನಿಲ್ಲಬಲ್ಲದು ಎಂಬುದು ಅಧ್ಯಯನ ವರದಿಗಳಿಂದ ಸ್ಪಷ್ಟವಾಗಿದೆ. ಆದ್ದರಿಂದ, ಕಠಿಣ ಮಾರ್ಗಸೂಚಿ ಪಾಲನೆಯ ಅಗತ್ಯವಿದೆ.

ಜಾಗೃತಿ ಮೂಡಿಸಿ: ಕಡ್ಡಾಯವಾಗಿ ಮಾಸ್ಕ್​ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಮುಂದಾಗಬೇಕಿದೆ. ಈಗ ಮೈಮರೆತು, ಸೋಂಕು ಹೆಚ್ಚಾದಾಗ ಸಕಾರವನ್ನು ದೂಷಿಸುವಕ್ಕಿಂತಲೂ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಸೂಕ್ತ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕಿದೆ.

ತಾಲೂಕಿನಲ್ಲಿ ಎಲ್ಲೂ ಕರೊನಾ ಸೋಂಕಿನ ಬಗ್ಗೆ ವರದಿಯಾಗಿಲ್ಲ. ದೈನಂದಿನ ಪರೀೆಗಳನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿಲ್ಲ. ಇನ್ನು ಎರಡ್ಮೂರು ದಿನಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಿ, ಪರೀೆಗಳನ್ನು ಮಾಡುವ ಜತೆಗೆ ಪರೀಾ ಕೇಂದ್ರಗಳನ್ನು ಆರಂಭಿಸಲಾಗುವುದು. > ಎನ್​.ಎಸ್​. ರವಿಕುಮಾರ್​, ತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net