ಸೋಮವಾರ ನೂರು ಜನ ಗುಣ

carona logo
Published on

ಗದಗ: ಜಿಲ್ಲೆಯಲ್ಲಿ ಸೋಮವಾರ 74 ಜನರಿಗೆ ಕರೊನಾ ಸೋಂಕು ತಗುಲಿದ್ದು, 100 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ.

ಇಲ್ಲಿವರೆಗೆ ಜಿಲ್ಲೆಯಲ್ಲಿ 2353 ಜನ ಸೋಂಕಿಗೆ ಒಳಗಾಗಿದ್ದು, 1067 ಸಕ್ರಿಯ ಪ್ರಕರಣಗಳಿವೆ. ಒಟ್ಟು 1232 ಜನ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ ಒಟ್ಟು 49 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ಸೋಂಕು ದೃಢಪಟ್ಟ ಪ್ರದೇಶಗಳು: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಬೆಟಗೇರಿ, ಮಸಾರಿ ಓಣಿ ಗಣೇಶ ದೇವಸ್ಥಾನದ ಹತ್ತಿರ, ಬಸವೇಶ್ವರ ನಗರ, ಹಾತಲಗೇರಿ, ಎಸ್​ಎಂಕೆ ನಗರ, ಹೆಲ್ತ್ಕ್ಯಾಂಪ್, ಬಾಳಕೇಶ್ವರಿ ನಗರ, ರಾಚೋಟೇಶ್ವರ ನಗರ, ಎ.ಪಿ.ಎಂ.ಸಿ.ಯಾರ್ಡ್, ಟಿವಿಎಸ್ ಶೋರೂಂ ಹತ್ತಿರ, ಸಂಭಾಪುರ ರಸ್ತೆ, ತೇಜಾ ನಗರ, ಆರ.ಕೆ. ನಗರ, ಕೇಶವನಗರ, ಖಾನತೋಟ, ಮೈಲಾರಲಿಂಗೇಶ್ವರ ನಗರ, ಸಾಲ ಓಣಿ, ಬಾಷಲ್ ಮಿಷನ್ ಕಾಂಪೌಂಡ್, ಗದಗ ತಾಲೂಕಿನ ಲಕ್ಕುಂಡಿ, ಚಿಂಚಲಿ, ಸೊರಟೂರ.

ನರಗುಂದ ಪಟ್ಟಣದ ಅಧ್ಯಾಪಕನಗರ, ರಾಚಯ್ಯನಗರ, ನರಗುಂದ ತಾಲೂಕಿನ ಶಿರೋಳ, ಜಗಾಪುರ, ದಂಡಾಪುರ.

ಶಿರಹಟ್ಟಿ ತಾಲೂಕಿನ ಸುವರ್ಣಗಿರಿ, ಸೂರಣಗಿ, ಮಾಗಡಿ, ಲಕ್ಷ್ಮೇಶ್ವರ.

ರೋಣ ಪಟ್ಟಣದ ಲಿಂಗನಗೌಡರ ನಗರ, ತಾಲೂಕಿನ ಬೆನಹಾಳ, ಹೊಳೆಆಲೂರ, ಮಲ್ಲಾಪುರ, ಹಿರೇಹಾಳ, ಶಾಂತಗೇರಿ, ಕಲ್ಲಿಗನೂರ, ಜಕ್ಕಲಿ, ಬೆಳವಣಿಕಿ.

ಮುಂಡರಗಿ ಪಟ್ಟಣದ ಅನ್ನದಾನೇಶ್ವರಿ ನಗರ, ಪೊಲೀಸ್ ಸ್ಟೇಷನ್, ಎ.ಡಿ. ನಗರ, ತಾಲೂಕಿನ ಬಾಗೇವಡಿ, ಬೆಣ್ಣಹಳ್ಳಿ, ಮುಂಡವಾಡ, ಮಕ್ತುಂಪುರ, ಕಲಕೇರಿ, ಗಂಗಾಪುರ, ಜಂತ್ಲಿ ಶಿರೂರ, ಹಮ್ಮಿಗಿ, ನಾಗರಹಳ್ಳಿ, ಸಿಂಗಟರಾಯನಕೇರಿ ತಾಂಡಾದಲ್ಲಿ ಸೋಂಕು ದೃಢಪಟ್ಟಿದೆ.

ಮೃತರ ವಿವರ:ನರಗುಂದ ನಿವಾಸಿ 69 ವರ್ಷದ ಪುರುಷ, ಹಾವೇರಿ ತಾಲೂಕಿನ ಹೊಸರಿತ್ತಿ ನಿವಾಸಿ 62 ವರ್ಷದ ಪುರುಷ, ಗದಗ ಬೆಟಗೇರಿ ನಗರದ ಹೆಲ್ತ್ಕ್ಯಾಂಪ್ ನಿವಾಸಿ 67 ವರ್ಷದ ಪುರುಷ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net