

ಧಾರವಾಡ: ಜಿಲ್ಲೆಯಲ್ಲಿ ಸೋಮವಾರ 71 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1159ಕ್ಕೆ ಏರಿದೆ. ಸೋಮವಾರ ಐವರು ಮೃತಪಟ್ಟಿದ್ದು, ಒಟ್ಟು 38 ಜನ ಕರೊನಾಕ್ಕೆ ಬಲಿಯಾಗಿದ್ದಾರೆ. ಸೋಮವಾರ ದೃಢಪಟ್ಟ 71 ಪ್ರಕರಣಗಳ ಮಾಹಿತಿ ತಾಲೂಕುವಾರು ಇಂತಿದೆ.
ಹುಬ್ಬಳ್ಳಿ ತಾಲೂಕು: ಕೆಮ್ಮು, ನಗಡಿ, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹುಬ್ಬಳ್ಳಿ ಕಾರವಾರ ರಸ್ತೆಯ 15 ವರ್ಷದ ಬಾಲಕ, ಕೌಲ್ಪೇಟೆಯ 68 ವರ್ಷದ ವೃದ್ಧ, 58 ವರ್ಷದ ಪುರುಷ, 48 ವರ್ಷದ ಮಹಿಳೆ, ಕಾಳಿದಾಸ ನಗರದ 27 ವರ್ಷದ ಮಹಿಳೆ, ಆನಂದ ನಗರದ 68 ವರ್ಷದ ವೃದ್ಧ, ಗೋಕುಲ ರಸ್ತೆಯ 62 ವರ್ಷದ ವೃದ್ಧ, ಬೀರಬಂದ ಓಣಿಯ 60 ವರ್ಷದ ವೃದ್ಧೆ, ಮಲ್ಲಿಕಾರ್ಜುನ ನಗರದ 55 ವರ್ಷದ ಮಹಿಳೆ, ಕೃಷ್ಣಾಪುರದ 58 ವರ್ಷದ ಪುರುಷ, ಶಿರೂರ ಪಾರ್ಕ್ನ 56 ವರ್ಷದ ಪುರುಷ, ದೇವಾಂಗಪೇಟೆಯ 52 ವರ್ಷದ ಪುರುಷ, ಹುಬ್ಬಳ್ಳಿಯ 55 ವರ್ಷದ ಪುರುಷ, 25 ವರ್ಷದ ಯುವತಿ, 50 ವರ್ಷದ ಮಹಿಳೆ, 61 ವರ್ಷದ ಪುರುಷ, 53 ವರ್ಷದ ಪುರುಷ, 55 ವರ್ಷದ ಪುರುಷ, ಶಿರಡಿ ನಗರದ 44 ವರ್ಷದ ಪುರುಷ, 29 ವರ್ಷದ ಯುವಕ, 48 ವರ್ಷದ ಪುರುಷ, ನಾರಾಯಣಸೋಫಾದ 53 ವರ್ಷದ ಪುರುಷ, ಬ್ಯಾಹಟ್ಟಿ ಪ್ಲಾಟ್ನ 38 ವರ್ಷದ ಪುರುಷ, ರಾಯನಾಳದ 26 ವರ್ಷದ ಯುವಕನಿಗೆ ಸೋಂಕು ತಗುಲಿದೆ.
ದ್ವಿತೀಯ ಸಂಪರ್ಕದಿಂದ ವಿದ್ಯಾನಗರದ 60 ವರ್ಷದ ವೃದ್ಧೆ, ಗಣೇಶ ನಗರದ 30 ವರ್ಷದ ಮಹಿಳೆ, ಹುಬ್ಬಳ್ಳಿಯ 41 ವರ್ಷದ ಪುರುಷ, ಹುಬ್ಬಳ್ಳಿಯ 27 ವರ್ಷದ ಯುವತಿ, ಹುಬ್ಬಳ್ಳಿಯ 29 ವರ್ಷದ ಯುವತಿ, ಶಿವಾಜಿ ನಗರದ 33 ವರ್ಷದ ಯುವಕ, ವಿದ್ಯಾನಗರದ 60 ವರ್ಷದ ವೃದ್ಧೆಗೆ ಸೋಂಕು ತಗುಲಿದೆ.
ಧಾರವಾಡ ತಾಲೂಕು: ವಾಲ್ಮೀಕಿ ಓಣಿಯ 52 ವರ್ಷದ ಪುರುಷ, ಸಾಯಿಬಾಬಾ ಕಾಲನಿಯ 63 ವರ್ಷದ ವೃದ್ಧ, ಚರಂತಿಮಠ ಗಾರ್ಡನ್ನ 32 ವರ್ಷದ ಯುವಕ, ಮರಾಠಾ ಕಾಲನಿಯ 35 ಪುರುಷ, ದಾನೇಶ್ವರಿ ನಗರ 2ನೇ ಕ್ರಾಸ್ನ 45 ವರ್ಷದ ಮಹಿಳೆ, ಮುರುಘಾಮಠ ಬಳಿಯ 38 ವರ್ಷದ ಪುರುಷ, ಜಯನಗರ 2ನೇ ಕ್ರಾಸ್ನ 67 ವರ್ಷದ ವೃದ್ಧ, ಗುಲಗಂಜಿಕೊಪ್ಪದ 50 ವರ್ಷದ ಮಹಿಳೆ, ಕೆಸಿಡಿ ಬಳಿಯ 31 ವರ್ಷದ ಮಹಿಳೆ, ಲಕಮನಹಳ್ಳಿಯ 25 ವರ್ಷದ ಯುವಕ, ಕುಮಾರೇಶ್ವರ ನಗರದ 48 ವರ್ಷದ ಪುರುಷ, ಮರಾಠಾ ಕಾಲನಿಯ 50 ವರ್ಷದ ಪುರುಷ, ಹನುಮಾನ ದೇವಸ್ಥಾನ ಬಳಿಯ 34 ವರ್ಷದ ಪುರುಷ, ಕಲ್ಯಾಣ ನಗರದ 64 ವರ್ಷದ ಪುರುಷ, ಧಾರವಾಡದ 49 ವರ್ಷದ ಪುರುಷ, ಆರ್.ಕೆ. ನಗರದ 28 ವರ್ಷದ ಯುವಕನಿಗೆ ಸೋಂಕು ತಗುಲಿದೆ.
ದ್ವಿತೀಯ ಸಂಪರ್ಕದಿಂದ ಧಾರವಾಡ ವಿದ್ಯಾಗಿರಿಯ 68 ವರ್ಷದ ವೃದ್ಧ, ಕಂಟಿ ಗಲ್ಲಿಯ 23 ವರ್ಷದ ಯುವಕ, 17 ವರ್ಷದ ಯುವತಿ, ಮಾಳಾಪುರದ 4 ವರ್ಷದ ಬಾಲಕಿ, 54 ವರ್ಷದ ಪುರುಷ, 52 ವರ್ಷದ ಮಹಿಳೆ, 13 ವರ್ಷದ ಬಾಲಕ, ಗಾಂಧಿ ನಗರದ 6 ವರ್ಷದ ಬಾಲಕಿ, 36 ವರ್ಷದ ಮಹಿಳೆ, ಕಮಲಾಪುರದ 33 ವರ್ಷದ ಪುರುಷ, ಶಿವಗಿರಿ ರೈಲ್ವೆ ಸೇತುವೆ ಬಳಿಯ 61 ವರ್ಷದ ವೃದ್ಧೆ, 32 ವರ್ಷದ ಮಹಿಳೆ, ದಾನೇಶ್ವರಿ ನಗರದ 12 ವರ್ಷ ಬಾಲಕ, ಮುರುಘಾಮಠ ಬಳಿಯ 54 ವರ್ಷದ ಮಹಿಳೆ, ಧಾರವಾಡದ 29 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಧಾರವಾಡದ ಕಂಟಿ ಗಲ್ಲಿಯ 50 ವರ್ಷದ ಮಹಿಳೆ ಹಾಗೂ ಹುಬ್ಬಳ್ಳಿಯ 38 ವರ್ಷದ ಪುರುಷ, 40 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಅಂತಾರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಹೊಂದಿರುವ ಧಾರವಾಡದ 28 ವರ್ಷದ ಯುವತಿಗೆ ಹಾಗೂ ಕೆಮ್ಮು, ನಗಡಿ, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಣ್ಣಿಗೇರಿ ಪಟ್ಟಣದ 31 ವರ್ಷದ ಮಹಿಳೆ, 32 ವರ್ಷದ ಪುರುಷ ಮತ್ತು ಬಾಗಲಕೋಟೆ ಜಿಲ್ಲೆ ನವನಗರದ 68 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬ್ಯಾಂಕ್ನಲ್ಲಿ ಗೊಂದಲ: ಹುಬ್ಬಳ್ಳಿ ಕೇಶ್ವಾಪುರದ ಎಸ್ಬಿಐ ಕಚೇರಿಯ ಉದ್ಯೋಗಿಯೊಬ್ಬರಿಗೆ ಕರೊನಾ ಬಂದಿರುವುದು ಭಾನುವಾರ ದೃಢಪಟ್ಟಿದೆ. ಹೀಗಾಗಿ, ಸೋಮವಾರ ಬ್ಯಾಂಕ್ ಕರ್ತವ್ಯಕ್ಕೆ ಬರಲು ಕೆಲವು ಉದ್ಯೋಗಿಗಳು ಹಿಂದೇಟು ಹಾಕಿ, ಹಿರಿಯ ಅಧಿಕಾರಿಗಳಲ್ಲಿ ಆತಂಕ ತೋಡಿಕೊಂಡರು. ಕರ್ತವ್ಯಕ್ಕೆಂದು ಬಂದವರೂ ಬ್ಯಾಂಕ್ ಒಳಗೆ ಹೋಗಲು ಅನುಮಾನ ವ್ಯಕ್ತಪಡಿಸಿದರು, ನಂತರ ಇಡೀ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಯಿತು ಎಂದು ತಿಳಿದುಬಂದಿದೆ.
ಕರೊನಾ ಪೀಡಿತರಾದ ಐವರು ಭಾನುವಾರ ರಾತ್ರಿಯಿಂದ ಈಚೆಗೆ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನೆರವೇರಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಕರೊನಾಕ್ಕೆ ಬಲಿಯಾದವರ ಸಂಖ್ಯೆ 38ಕ್ಕೆ ಏರಿದೆ.
ಶಾಸಕ ಪ್ರಸಾದ ಅಬ್ಬಯ್ಯ ಅವರ ಪತ್ನಿ, ಸಹೋದರ, ಆಪ್ತ ಸೇರಿ ಕೆಲವರಿಗೆ ಕರೊನಾ ಸೋಂಕು ತಗುಲಿದೆ. ಅವರನ್ನು ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದೈವದಿಂದ ಶಾಸಕರ ತಾಯಿ ಹಾಗೂ ಮಕ್ಕಳ ವರದಿ ನೆಗೆಟಿವ್ ಬಂದಿದೆ. ಶಾಸಕರ ನಿವಾಸದ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.