ಸೋಮನಾಥನ ಮಹಾದ್ವಾರ ನಿರ್ವಣಕ್ಕೆ ಸಹಾಯ

4 LXR -SOMANATH TEMPLE
Published on

ಲಕ್ಷ್ಮೇಶ್ವರ: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಪುಲಿಗೆರೆಯ ಸೋಮನಾಥನ ಹೆಸರಿನ ಮಹಾದ್ವಾರ ನಿರ್ವಿುಸಲು ಇದೀಗ ಕಾಲ ಕೂಡಿ ಬಂದಿದೆ. ಶಾಸಕ ರಾಮಣ್ಣ ಲಮಾಣಿ ಅವರು ಈ ದ್ವಾರವನ್ನು ಸಂಪೂರ್ಣ ತಾವೇ ನಿರ್ವಿುಸಿಕೊಡುವುದಾಗಿ ಒಪ್ಪಿಗೆ ಸೂಚಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಸಮಿತಿ ಮುಖಂಡ ಸೋಮಣ್ಣ ಮುಳಗುಂದ ಹೇಳಿದರು.

ಭಾನುವಾರ ಬೆಳಗ್ಗೆ ಶಾಸಕ ರಾಮಣ್ಣ ಲಮಾಣಿ ಅವರ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಅವರು ಶಾಸಕರನ್ನು ಅಭಿನಂದಿಸಿದರು. ನಂತರ ಪಟ್ಟಣದ ಶಿವಯೋಗಿ ಅಂಕಲಕೋಟಿ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಹಾದ್ವಾರ ನಿರ್ಮಾಣ ಕಾರ್ಯಕ್ಕೆ ಸುಮಾರು 18 ಲಕ್ಷ ರೂ. ವೆಚ್ಚವಾಗಲಿದೆ. ಅ. 25ರಂದು ಬೆಳಗ್ಗೆ 9ಕ್ಕೆ ಶಾಸಕ ರಾಮಣ್ಣ ಲಮಾಣಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದರು.

ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಪಿ. ಪಾಟೀಲ, ಚಂಬಣ್ಣ ಬಾಳಿಕಾಯಿ, ಸಿದ್ದನಗೌಡ ಬೊಳ್ಳೊಳ್ಳಿ, ಶಿವಯೋಗಿ ಅಂಕಲಕೋಟಿ, ಅಶ್ವಿನಿ ಅಂಕಲಕೋಟಿ, ಸುರೇಶ ರಾಚನಾಯ್ಕರ, ರುದ್ರಪ್ಪ ನರೇಗಲ್, ಅಶೋಕಗೌಡ ಪಾಟೀಲ, ಸುರೇಶ ಚೌಕನವರ, ರಾಜಶೇಖರಯ್ಯ ಶಿಗ್ಲಿಮಠ, ಬಸವರಾಜ ಮೆಣಸಿನಕಾಯಿ, ದುಂಡೇಶ ಕೊಟಗಿ, ಪ್ರಕಾಶ ಮಾದನೂರ, ವಿಜಯ ಕುಂಬಾರ, ಬಸವರಾಜ ಚಕ್ರಸಾಲಿ, ವಿಶಾಲ್ ಬಟಗುರ್ಕಿ, ಗಂಗಾಧರ ಉಮಚಗಿ, ಶಂಕರ ಗುಡಗೇರಿ, ಅರುಣ ಪಾಟೀಲ, ಜಾಹೀರ್ ಮೋಮಿನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net