ಸೋಫಾ ಖರೀದಿಸುವುದಾಗಿ ನಂಬಿಸಿ ವಂಚನೆ

Cyber Crime
Published on

ಹುಬ್ಬಳ್ಳಿ: ಓಎಲ್​ಎಕ್ಸ್​ನಲ್ಲಿ ಸೋಫಾ ಖರೀದಿಸುವುದಾಗಿ ನಂಬಿಸಿ ವಾಟ್ಸ್ ಆಪ್ ಮೂಲಕ ಕ್ಯೂ ಆರ್ ಕೋಡ್ ಕಳುಹಿಸಿ ವ್ಯಕ್ತಿಯೊಬ್ಬರಿಂದ 90,002 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ಆಸ್ನಾ ಧೀರಜ್ ಮದನ್ (26) ವಂಚನೆಗೀಡಾದವರು. ಓಎಲ್​ಎಕ್ಸ್​ನಲ್ಲಿ ಸೋಫಾ ಮಾರಾಟದ ಕುರಿತು ಆಸ್ನಾ ಜಾಹೀರಾತು ಹಾಕಿದ್ದರು. ಅದರಲ್ಲಿದ್ದ ಮೊಬೈಲ್ ನಂಬರ್ ಪಡೆದು ಅ. 19ರಂದು ಅಪರಿಚಿತ ವ್ಯಕ್ತಿ ಮತ್ತು ಮಹಿಳೆಯೊಬ್ಬರು ಕರೆ ಮಾಡಿ, ಸೋಫಾ ಖರೀದಿಸುವುದಾಗಿ ಹೇಳಿದ್ದರು. ಹಣ ಜಮೆ ಮಾಡುತ್ತೇನೆ ಎಂದು ನಂಬಿಸಿದ್ದರು.

ವಾಟ್ಸ್ ಆಪ್ ನಂಬರ್ ಪಡೆದು ಕ್ಯೂ ಆರ್ ಕೋಡ್ ಕಳುಹಿಸಿದ್ದರು. ಕೋಡ್ ಸ್ಕ್ಯಾನ್ ಮಾಡಿ ಯು.ಪಿ.ಐ. ಪಿನ್ ಹಾಕಿ ಸಬ್​ವಿುಟ್ ಮಾಡಲು ಹೇಳಿದ್ದರು. ಆಸ್ನಾ ಆ ಪ್ರಕಾರ ಮಾಡಿದಾಗ, ಎಸ್​ಬಿಐ ಖಾತೆಯಿಂದ ಹಂತ ಹಂತವಾಗಿ 90,002 ರೂ. ಆನ್​ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಈ ಕುರಿತು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹುಬ್ಬಳ್ಳಿ: ಓಎಲ್​ಎಕ್ಸ್​ನಲ್ಲಿ ಸೋಫಾ ಖರೀದಿಸುವುದಾಗಿ ನಂಬಿಸಿ ವಾಟ್ಸ್ ಆಪ್ ಮೂಲಕ ಕ್ಯೂ ಆರ್ ಕೋಡ್ ಕಳುಹಿಸಿ ವ್ಯಕ್ತಿಯೊಬ್ಬರಿಂದ 90,002 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ಆಸ್ನಾ ಧೀರಜ್ ಮದನ್ (26) ವಂಚನೆಗೀಡಾದವರು. ಓಎಲ್​ಎಕ್ಸ್​ನಲ್ಲಿ ಸೋಫಾ ಮಾರಾಟದ ಕುರಿತು ಆಸ್ನಾ ಜಾಹೀರಾತು ಹಾಕಿದ್ದರು. ಅದರಲ್ಲಿದ್ದ ಮೊಬೈಲ್ ನಂಬರ್ ಪಡೆದು ಅ. 19ರಂದು ಅಪರಿಚಿತ ವ್ಯಕ್ತಿ ಮತ್ತು ಮಹಿಳೆಯೊಬ್ಬರು ಕರೆ ಮಾಡಿ, ಸೋಫಾ ಖರೀದಿಸುವುದಾಗಿ ಹೇಳಿದ್ದರು. ಹಣ ಜಮೆ ಮಾಡುತ್ತೇನೆ ಎಂದು ನಂಬಿಸಿದ್ದರು.

ವಾಟ್ಸ್ ಆಪ್ ನಂಬರ್ ಪಡೆದು ಕ್ಯೂ ಆರ್ ಕೋಡ್ ಕಳುಹಿಸಿದ್ದರು. ಕೋಡ್ ಸ್ಕ್ಯಾನ್ ಮಾಡಿ ಯು.ಪಿ.ಐ. ಪಿನ್ ಹಾಕಿ ಸಬ್​ವಿುಟ್ ಮಾಡಲು ಹೇಳಿದ್ದರು. ಆಸ್ನಾ ಆ ಪ್ರಕಾರ ಮಾಡಿದಾಗ, ಎಸ್​ಬಿಐ ಖಾತೆಯಿಂದ ಹಂತ ಹಂತವಾಗಿ 90,002 ರೂ. ಆನ್​ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಈ ಕುರಿತು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net