ಸೋಡಿಗದ್ದೆ ಜಾತ್ರೆಗೆ ಭಕ್ತ ಸಾಗರ

24bkl1
Published on

ಭಟ್ಕಳ: ತಾಲೂಕಿನ ಸೋಡಿಗದ್ದೆ ಶ್ರೀ ಮಹಾಸತಿ ದೇವಿ ಜಾತ್ರೆಗೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ. ಜಾತ್ರೆಯ ಎರಡನೇ ದಿನ ಭಾನುವಾರವೂ ಸಾವಿರಾರು ಭಕ್ತರು ಹರಕೆ ಕಾಣಿಕೆಗಳನ್ನು ಒಪ್ಪಿಸಿ ಕೃತಾರ್ಥರಾದರು. ದೇವಸ್ಥಾನ ಮುಂಭಾಗದಲ್ಲಿ ಸಿದ್ಧಪಡಿಸಿದ ಕೆಂಡದಲ್ಲಿ ಮಹಿಳೆಯರು, ಬಾಲಕರಾದಿಯಾಗಿ ನೂರಾರು ಭಕ್ತರು ಪೂಜಾರಿಗಳ ನೇತೃತ್ವದಲ್ಲಿ ಕೆಂಡ ಸೇವೆ ನೆರವೇರಿಸಿದರು. ದೇವಸ್ಥಾನಕ್ಕೆ ಜಿಲ್ಲೆ ಅಲ್ಲದೆ, ವಿವಿಧ ಜಿಲ್ಲೆ, ನೆರೆ ರಾಜ್ಯಗಳಿಂದಲೂ ಅನೇಕ ಜನರು ಆಗಮಿಸುತ್ತಾರೆ. ದೇವಿ ದರ್ಶನಕ್ಕಾಗಿ ತಾಸುಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ, ಪ್ರಸಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net