ಸೋಗಾನೆಯಲ್ಲಿ ಮತ್ತೆ ಭೂಸ್ವಾಧೀನ ಕೈಬಿಡಿ

15 smg 6
Published on

ಶಿವಮೊಗ್ಗ: ತಾಲೂಕಿನ ಸೋಗಾನೆ ಸರ್ವೆ ನಂ.120ರಲ್ಲಿ ಮತ್ತೆ ಭೂ ಸ್ವಾಧೀನ ಕೈಬಿಟ್ಟು ಫಾಮ್ರ್ ನಂ.50, 53ರ ಅನ್ವಯ ಅರ್ಜಿ ಸ್ವೀಕರಿಸಿ ಹಕ್ಕುಪತ್ರ ನೀಡಬೇಕೆಂದು ಸ್ಥಳೀಯ ರೈತರು ಭೂಮಿ ಹಕ್ಕು ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಈಗಾಗಲೇ ಸೋಗಾನೆ ಗ್ರಾಮದ ವಿಮಾನ ನಿಲ್ದಾಣಕ್ಕಾಗಿ ಸ.ನಂ.120ರಲ್ಲಿ ರೈತರು ಭೂಮಿ ತ್ಯಾಗ ಮಾಡಿದ್ದಾರೆ. ಈಗ ಮತ್ತೆ ಅದೇ ಸರ್ವೆ ನಂಬರ್​ನಲ್ಲಿ ಉಳಿದಿರುವ ಭೂಮಿಯನ್ನೂ ಸ್ವಾಧೀನಕ್ಕೆ ಪಡೆಯಲು ಮುಂದಾಗಿರುವುದರಿಂದ ಆತಂಕ ಹೆಚ್ಚಿದೆ ಎಂದರು.

ಈ ಹಿಂದೆ ರೈತರಿಂದ ವಶಪಡಿಸಿಕೊಂಡ ಭೂಮಿಗೆ ಬದಲಾಗಿ ನಿವೇಶನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಆ ಭರವಸೆ ಹುಸಿಯಾಗಿವೆ. ರೈತರಿಗೆ ಇರುವ ಭೂಮಿ ಹಕ್ಕನ್ನು ಕಸಿದುಕೊಂಡಂತಾಗಿದೆ. ನಾವು 50 ವರ್ಷಗಳಿಂದ ಇಲ್ಲಿ ಸಾಗುವಳಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು. ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ರೈತರಿಗೆ ಆದಷ್ಟು ಬೇಗ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.

ಸೋಗಾನೆ ಸರ್ವೆ ನಂಬರ್ 120ರ ಭೂಮಿ ಹಕ್ಕು ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ಕೃಷ್ಣಪ್ಪ, ಗೌರವಾಧ್ಯಕ್ಷ ಎಂ.ಜಿ.ಮುರುಗೇಶಪ್ಪ, ಉಪಾಧ್ಯಕ್ಷ ಮಹಾದೇವ್, ಪ್ರಧಾನ ಕಾರ್ಯದರ್ಶಿ ಎಂ.ಎಚ್.ಕಾಳರಾಯ ಇತರರಿದ್ದರು.ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net