ಸೋಂಕಿನಿಂದ ಗುಣವಾದ ಇಬ್ಬರ ಬಿಡುಗಡೆ

31-gdg-1
Published on

ಗದಗ: ಕೋವಿಡ್ 19 ಸೋಂಕಿನಿಂದ ಗುಣವಾದ ಇಬ್ಬರು ಯುವಕರನ್ನು ಭಾನುವಾರ ಗದಗ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಯುವಕರನ್ನು ಬೀಳ್ಕೊಟ್ಟರು.

ಗುಜರಾತದಿಂದ ಮೇ 22ರಂದು ಜಿಲ್ಲೆಗೆ ಹಿಂದಿರುಗಿದ 17 ವರ್ಷದ ಯುವಕ ಹಾಗೂ ಇವನೊಂದಿಗೆ ಸಂಪರ್ಕ ಹೊಂದಿದ್ದ 16 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿತ್ತು. ಈ ಇಬ್ಬರನ್ನು ಜಿಮ್್ಸ ಕೋವಿಡ್ ಪ್ರತ್ಯೇಕ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡ ಚಿಕಿತ್ಸೆ ನೀಡಲಾಯಿತು.

‘9 ದಿನಗಳ ಚಿಕಿತ್ಸೆಯ ನಂತರ ಮೇ 31ರಂದು ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಇಬ್ಬರನ್ನೂ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ. ಮುಂದಿನ 14 ದಿನಗಳ ಕಾಲ ಬಿಡುಗಡೆಗೊಂಡ ಇಬ್ಬರನ್ನು ಅವರ ಮನೆಯಲ್ಲಿಯೇ ಕ್ವಾರಂಟೈನ್​ನಲ್ಲಿ ಇರಿಸಲಾಗುವುದು’ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 35 ಸೋಂಕಿತರ ಪೈಕಿ 21 ಸಕ್ರಿಯ ಕೇಸ್​ಗಳಿದ್ದು, ಒಬ್ಬರು ಮೃತಪಟ್ಟಿದ್ದಾರೆ. 13 ಜನರು ಗುಣರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಕಾರ್ತಾದಿಂದ ಬಂದವಗೆ ಸೋಂಕು

ಗದಗ: ಇಂಡೋನೇಷ್ಯಾದ ಜಕಾರ್ತಾಕ್ಕೆ ತೆರಳಿದ್ದ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಜಕಾರ್ತಾದಿಂದ ಬೆಂಗಳೂರಿಗೆ ಬಂದ ಅವರನ್ನು ಬೆಂಗಳೂರಿನಲ್ಲಿಯೇ ಪರೀಕ್ಷೆಗೊಳಪಡಿಠಜಿ, ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net