ಸೊಸೈಟಿಗಳಿಂದ ಕೃಷಿಕರ ಕನಸು ನನಸು

18 YLP 03
Published on

ಯಲ್ಲಾಪುರ: ರೈತರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು, ಕೃಷಿಕರ ಹಿತ ಕಾಯಲು ಅಸ್ತಿತ್ವಕ್ಕೆ ಬಂದ ಜಿಲ್ಲೆಯ ಸಹಕಾರಿ ಸಂಘಗಳು ಈಗ ಉತ್ತಮವಾಗಿ ಬೆಳೆದಿದ್ದು, ಹಿಂದಿನವರ ಕನಸು ನನಸು ಮಾಡುತ್ತಿವೆ ಎಂದು ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ಹೇಳಿದರು.

ತಾಲೂಕಿನ ಕುಂದರಗಿಯ ಸೇವಾ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಶ್ರೇಷ್ಠ ಸಹಕಾರಿ ವ್ಯವಸ್ಥೆಯಿಂದಾಗಿ ಸಂಘಕ್ಕೂ ಲಾಭ, ರೈತರಿಗೂ ಪ್ರಯೋಜನವಾಗುತ್ತಿದೆ. ರೈತರ ಪತ್ತು ಮಾರಾಟ ಮತ್ತು ಜೋಡಣೆಯಲ್ಲಿ ಸಹಕಾರಿ ಸಂಘಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಎನ್.ಎಸ್.ಹೆಗಡೆ ಕುಂದರಗಿ ಮಾತನಾಡಿ, ಕೃಷಿಕರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡುವತ್ತ ಸಹಕಾರಿ ಸಂಘಗಳು ಇನ್ನಷ್ಟು ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಹಕಾರಿ ಸಂಘಗಳ ಮೂಲಕ ವಿತರಿಸುವಂತಾಗಬೇಕು ಎಂದರು.

ನೂತನವಾಗಿ ಸ್ಥಾಪಿಸಲಾದ ಎ.ಟಿ.ಎಂನ್ನು ಕೆ.ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಸ್ಮರಣ ಸಂಚಿಕೆಯನ್ನು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಬಿಡುಗಡೆಗೊಳಿಸಿದರು. ಟಿ.ಎಸ್.ಎಸ್.ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಹಾಸಣಗಿ ಸೊಸೈಟಿಯ ಅಧ್ಯಕ್ಷ ಆರ್.ಎನ್.ಹೆಗಡೆ, ಗೋರ್ಸಗದ್ದೆ, ಏಪಿಎಂಸಿ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ, ಕದಂಬ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ, ಲೆಕ್ಕ ಸಂಶೋಧನಾ ಸಹಾಯಕ ನಿರ್ದೇಶಕ ಜಿ.ಕೆ. ರಾಮಪ್ಪ, ಪ್ರಮುಖರಾದ ಉಮೇಶ ಭಾಗ್ವತ್, ಡಿ.ಟಿ.ಹೆಗಡೆ, ಬಿ.ಡಿ.ಡಿಸೋಜಾ, ವಿ.ಎನ್.ಭಟ್ಟ ಅಳ್ಳಂಕಿ, ಶ್ರೀಕಾಂತ ಭಟ್ಟ, ರವಿ ಪಟಗಾರ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಹೇರಂಬ ಹೆಗಡೆ, ಸತೀಶ ಹೆಗಡೆ, ಚಂದ್ರಶೇಖರ ಹೆಗಡೆ, ಮಂಜುನಾಥ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net