ಸೊಳ್ಳೆಗಳ ನಿಯಂತ್ರಿಣಕ್ಕೆ ಆರೋಗ್ಯ ಇಲಾಖೆಯಿಂದ ವಿಶೇಷ ಕಾರ್ಯಕ್ರಮ

06BTP001 (1)
ಚಪ್ಪರದಹಳ್ಳಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿರುವ ಮೀನು ಸಾಕಣೆ ತೊಟ್ಟಿಗೆ ಲಾರ್ವಾಹಾರಿ ಮೀನಿನ ಮರಿಗಳನ್ನು ವೈದ್ಯಾಧಿಕಾರಿ ಡಾ.ಸಂದೀಪ್ ಬಿಟ್ಟರು. ರವಿ, ರಚನಾ, ದೇವಿರಮ್ಮ, ಲೀಲಾವತಿ, ಪುಟ್ಟಲಕ್ಷ್ಮೀ, ರೇವತಿ, ಗೀತಾ ಇದ್ದರು.
Published on

ಬೆಟ್ಟದಪುರ: ಸಮೀಪದ ಚಪ್ಪರದಹಳ್ಳಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಗುರುವಾರ ಲಾರ್ವಾಹಾರಿ ಮೀನು ಸಾಕಣೆ ತೊಟ್ಟಿ ಹಾಗೂ ಗ್ರಾಮದ ಕೆರೆಗೆ ಲಾರ್ವಾ ತಿನ್ನುವ ಮೀನಿನ ಮರಿಗಳನ್ನು ಬಿಡಲಾಯಿತು.

ಕೇಂದ್ರದ ವೈದ್ಯಾಧಿಕಾರಿ ಡಾ.ಸಂದೀಪ್ ಮಾತನಾಡಿ ಡೆಂಘೆ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳಿಗೆ ಕಾರಣವಾಗುವ ಸೊಳ್ಳೆಗಳ ಹರಡುವಿಕೆ ಮತ್ತು ಉತ್ಪತ್ತಿ ತಡೆಯಲು ಲಾರ್ವಾಹಾರಿ ಮೀನುಗಳನ್ನು ಬಿಡಲಾಗುತ್ತಿದೆ. ನಿರಂತರವಾಗಿ ನೀರು ನಿಲ್ಲುವ ಕೆರೆ, ಬಾವಿ, ತೊಟ್ಟಿಗಳು ಸೇರಿದಂತೆ ಮುಂತಾದ ಶಾಶ್ವತ ನೀರಿನ ತಾಣಗಳಲ್ಲಿ ಈ ಮೀನುಗಳನ್ನು ಬಿಡಲಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ಪ್ರಭಾವ ಬೀರುವ ಸೊಳ್ಳೆಗಳ ನಿಯಂತ್ರಿಸಲು ಆರೋಗ್ಯ ಇಲಾಖೆ ವಿಶೇಷ ಕಾರ್ಯಕ್ರಮ ರೂಪಿಸಿದೆ ಎಂದರು.

ಆರೋಗ್ಯ ನಿರೀಕ್ಷಕ ರವಿ, ಪ್ರಯೋಗಶಾಲಾ ತಂತ್ರಜ್ಞ ರವಿಕುಮಾರ್, ಸಮುದಾಯ ಅರೋಗ್ಯಾಧಿಕಾರಿ ರಚನಾ, ಆಶಾ ಕಾರ್ಯಕರ್ತೆಯರಾದ ಪುಟ್ಟಲಕ್ಷ್ಮೀ, ದೇವಿರಮ್ಮ, ಲೀಲಾವತಿ, ರೇವತಿ, ಸಿಬ್ಬಂದಿ ಗೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net