

ಚಿತ್ರದುರ್ಗ:ನಾಗರಿಕರು ಸೊಳ್ಳೆ ತಾಣಗಳ ನಾಶಕ್ಕೆ ಮುಂದಾಗ ಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಸೊಳ್ಳೆ ದಿ ನದ ಅಂಗವಾಗಿ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಕೀಟಜನ್ಯ ರೋಗಗಳು ಹಾಗೂ ಸೊಳ್ಳೆ ತಾಣಗಳ ನಾಶದ ಮಹತ್ವ ದೆಡೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದ್ದು,ಸೊಳ್ಳೆ ತಾಣಗಳ ನಾಶ ಮುಖ್ಯ ಗುರಿಯಾಗಬೇಕಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ,ಭಾರತ 4151 ಸೊಳ್ಳೆ ಪ್ರಭೇದಗಳ ದೇಶವಾಗಿದೆ. ಸೊಳ್ಳೆ ಗಳು ಮಲೇರಿಯಾ, ಚಿಕೂನ್‌ಗುನ್ಯಾ,ಡೆಂೆ,ಜಿಕಾದಂತಹ ರೋಗವಾಹಕಗಳಾಗಿವೆ. ಸೊಳ್ಳೆಗಳ ನಿಯಂತ್ರಣ ಮಾಡದಿದ್ದಲ್ಲಿ ಮುಂದೊ ಂದು ದಿನ ದೊಡ್ಡ ಮಟ್ಟದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಆರ್ಥಿಕ ಹೊರೆ ಉಂಟಾಗ ಬಹುದೆಂದರು. ಸೊಳ್ಳೆಗಳ ನಿಯಂತ್ರಣ ಕುರಿಂತೆ ಸಾಮಾಜಿಕ ಜಾಲತಾಣಗಳ ಜಾಗೃತಿ ಮೂಡಿಸುವ ಉತ್ತಮ ರಚನೆಗಳಿಗೆ ಬಹುಮಾನ ನೀಡಲಾಗುತ್ತದೆ ಎಂದರು.
ಪ್ರಾಂಶುಪಾಲ ನರಸಿಂಹಮೂರ್ತಿ,ಉಪನ್ಯಾಸಕರಾದ ಕೃಷ್ಣ, ವಿ.ಚನ್ನಬಸಪ್ಪ,ಎನ್.ರಾಘವೇಂದ್ರ, ಡಾ.ಮೋಹನ್, ತಿಪ್ಪೇಸ್ವಾಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಪ್ರತಿಜ್ಞಾವಿಧಿ ಬೋಧಿಸಿದರು. ವೈದ್ಯಾಧಿಕಾರಿ ಡಾ.ಸುರೇಂದ್ರ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾನಾಯ್ಕಾ,ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್‌ಬಾಬು, ಶ್ರೀನಿವಾಸ್, ಮಲ್ಲಿಕಾರ್ಜುನ,ಶ್ರೀನಿವಾಸ ಮಳಲಿ, ಗುರುಮೂರ್ತಿ, ನಾಗರಾಜ್,ಪ್ರವೀಣ್ ಮತ್ತಿತರರು ಇದ್ದರು.