ಸೊಳ್ಳೆ ಉತ್ಪತ್ತಿಗೆ ಅವಕಾಶ ಕೊಡಬೇಡಿ

nrp dengu
ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಡೆಂೆ ಜಾಗತಿ ಅಭಿಯಾನ ನಡೆಸಲಾಯಿತು. ಡಾ. ಆಕರ್ಷ್, ಪೂರ್ಣಿಮಾ, ದರ್ಶನ್, ಮಹಾತ್ಮ ಗಾಂಧಿ, ಗಣೇಶ್ ಓಲೇಕಾರ್, ಪವನ್‌ಕರ್, ಪೂಜಾ ಇತರರಿದ್ದರು.
Published on

ಎನ್.ಆರ್.ಪುರ: ಡೆಂೆ ವೈರಸ್‌ನಿಂದ ಹುಟ್ಟುವ ಕಾಯಿಲೆಯಾಗಿದ್ದು, ಈಡಿಸ್ ಈಜಿಪ್ಟ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತದೆ. ಈ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಡೆಂೆಯನ್ನೂ ಮೂಳೆ ಮುರಿತ ಕಾಯಿಲೆ ಎಂಬುದಾಗಿಯೂ ಕರೆಯುತ್ತಾರೆ ಎಂದು ತಾಲೂಕು ಸಾಂಕ್ರಾಮಿಕ ರೋಗ ಶಾಸಜ್ಞ ಡಾ. ಆಕರ್ಷ್ ತಿಳಿಸಿದರು.

ಮಂಗಳವಾರ ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ಡೆಂೆ ಜಾಗತಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಡೆಂೆ ಜ್ವರ, ಡೆಂೆ ರಕ್ತಸ್ರಾವ ಜ್ವರ, ಡೆಂೆ ಶಾಕ್ ಸಿಂಡ್ರೋಮ್‌ಗಳಾಗಿವೆ. ವಿಪರೀತ ತಲೆನೋವು, ಜ್ವರ, ಕೈಕಾಲು ಗಂಟುಗಳಲ್ಲಿ ನೋವು ಕಂಡುಬರುವುದು. ವಾಂತಿ, ವಾಕರಿಕೆ, ಸುಸ್ತು, ನಿಶಕ್ತಿ, ಕಣ್ಣು ಗುಡ್ಡೆಯ ಹಿಂಬದಿಯಲ್ಲಿ ನೋವು, ಮೈಮೇಲೆ ರಕ್ತಸ್ರಾವದ ಗುರುತುಗಳು, ವಸಡಿನಲ್ಲಿ ರಕ್ತಸ್ರಾವ, ರಕ್ತದಲ್ಲಿ ಕಿರುತಟ್ಟೆ ಪ್ರಮಾಣಗಳು ಕಡಿಮೆಯಾಗುವುದು ಪ್ರಮುಖ ಲಕ್ಷಣಗಳು ಎಂದು ವಿವರಿಸಿದರು.

ಕಾಯಿಲೆಯನ್ನು ರಕ್ತ ಪರೀಕ್ಷೆಯಿಂದ ಪತ್ತೆ ಹಚ್ಚಬಹುದು. ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಲಕ್ಷಣ ಆಧಾರಿತ ಚಿಕಿತ್ಸೆ ಮಾತ್ರ ಇರುತ್ತದೆ. ಕಾಯಿಲೆ ನಿರ್ಲಕ್ಷಿಸಿದರೆ ಮರಣ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಪ್ರಾತ್ಯಕ್ಷಿಕೆ ಮೂಲಕ ಮೂಲಕ ಕಾಯಿಲೆಯ ಮಾಹಿತಿ ನೀಡಿ, ಯಾವುದೇ ಜ್ವರವಿದ್ದರೂ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ತೆಗೆದುಕೊಳ್ಳಬಾರದು. ಮನೆಯ ಸುತ್ತಮುತ್ತ ಘನ ತ್ಯಾಜ್ಯಗಳಲ್ಲಿ ನೀರು ನಿಲ್ಲದಂತೆ ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಂಶುಪಾಲೆ ಪೂರ್ಣಿಮಾ ಮಾತನಾಡಿ, ಆರೋಗ್ಯವೇ ಭಾಗ್ಯವಾಗಿದೆ. ರೋಗ ಹರಡದಂತೆ ತಡೆಗಟ್ಟುವುದು ಉತ್ತಮ. ವಿದ್ಯಾರ್ಥಿಗಳು ಜೀವನದಲ್ಲಿ ಸ್ವಚ್ಛತೆ ಕಾಪಾಡಿಕೊಂಡರೆ ರೋಗಗಳಿಂದ ದೂರವಿರಬಹುದು ಎಂದರು.

ಸಿಎಚ್‌ಒ ರಾಹಿಲಾಶೇಕ್, ಶಿಕ್ಷಕರಾದ ಮಹಾತ್ಮ ಗಾಂಧಿ, ಗಣೇಶ್ ಓಲೆಕಾರ್, ಅನಸೂಯಾ, ಪೂಜಾ, ಆಶಾ ಕಾರ್ಯಕರ್ತೆ ವೇದಾವತಿ, ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್‌ಕರ್, ಆಪ್ತ ಸಮಾಲೋಚಕ ಸುಹಾಸ್, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net