ಸೊರಬದಲ್ಲಿ ಸುಸಜ್ಜಿತ ಕಾರ್ಮಿಕ ಭವನ ನಿರ್ಮಾಣ: ಕುಮಾರ್ ಬಂಗಾರಪ್ಪ

SOR WEB
Published on

ಸೊರಬ: ಕಾರ್ಮಿಕರು ನೋಂದಾಯಿತ ಸಂಘದ ಮೂಲಕ ಗುರುತಿನ ಚೀಟಿ ಪಡೆದುಕೊಂಡು ಸರ್ಕಾರದ ಉಚಿತ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದರು. ಶನಿವಾರ ಡಾ.ರಾಜ್ ಕಲಾಕ್ಷೇತ್ರದಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ ನೋಂದಾಯಿತ ಕಟ್ಟಡ ಹಾಗೂ ಇತರೆ ಕಾರ್ಮಿಕಗೆ ಟೂಲ್‌ಕಿಟ್ ವಿತರಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮ ಕಾರ್ಮಿಕ ಇಲಾಖೆಯ ಅಥವಾ ಶಾಸಕರ ಕಾರ್ಯಕ್ರಮವಲ್ಲ. ನೀವು ಕಟ್ಟುವಂತಹ ತೆರಿಗೆ ಹಣದಿಂದ ನಡೆಯುತ್ತಿದೆ. ಬರುವ ದಿನಗಳಲ್ಲಿ ಪಟ್ಟಣದಲ್ಲಿ ಸುಸಜ್ಜಿತವಾದ ಕಾರ್ಮಿಕ ಭವನ ನಿರ್ಮಾಣ ಮಾಡಲಾಗುವುದು ಎಂದರು. 950ಕ್ಕೂ ಹೆಚ್ಚಿನ ಕಾರ್ಮಿಕರಿಗೆ ಟೂಲ್‌ಕಿಟ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net