ಸೊರಬದಲ್ಲಿ ವಿಜೃಂಭಣೆಯ ವಿಸರ್ಜನೆ

7sor4
ಸೊರಬ ಪಟ್ಟಣದಲ್ಲಿ ಗಣಪತಿ ಮೂರ್ತಿ ಮೆರವಣಿಗೆ.
Published on

ಸೊರಬ: ಪಟ್ಟಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾದ ಮೂರ್ತಿಗಳನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಗಣೇಶ ಮಂಡಳಿ ಸದಸ್ಯರು ಜೈ ಶ್ರೀರಾಮ್, ಜೈ ಗಣೇಶ ಘೋಷಣೆ ಕೂಗಿ ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು ಸೇರಿ ಭಕ್ತರು ಗೀತೆಗಳಿಗೆ ಹೆಜ್ಜೆಹಾಕಿದರು.

ಸಂಜೆ 7ಕ್ಕೆ ಎಲ್ಲ ಮೂರ್ತಿಗಳು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತಕ್ಕೆ ಆಗಮಿಸಿದವು. ಸಾಗರ ರಸ್ತೆಯ ಹಿರೇಶಕುನದ ಶ್ರೀಮಾರಿಕಾಂಬ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ, ಭೂರೇಶ್ವರ ವಾಹನ ಚಾಲಕರ ಮತ್ತು ಮಾಲೀಕರ ಸಂಘ, ಮುಖ್ಯರಸ್ತೆಯ ವಾಹನ ಚಾಲಕರ ಸಂಘ, ಚಿಕ್ಕಪೇಟೆಯ ಗಜಾನನ ಯುವಕರ ಸಂಘ, ಸೊಪ್ಪಿನಕೇರಿಯ ಶ್ರೀ ದುರ್ಗಾಂಬ ಯುವಕ ಸಂಘ ಹಾಗೂ ಮರೂರು ರಸ್ತೆಯ ಶ್ರೀ ಮಹಾಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ಮೆರವಣಿಗೆ ಕಣ್ಮನ ಸೆಳೆಯಿತು.

ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದ ಮೆರವಣಿಗೆ ನೋಡಲು ಸಾವಿರಾರು ಜನ ಸೇರಿದ್ದರು. ಕಳೆದ 11 ದಿನಗಳಿಂದ ಪೂಜೆ ನಡೆಸಿದ ಗಣೇಶ ಮೂರ್ತಿಗಳನ್ನು ದಂಡಾವತಿ ನದಿಯಲ್ಲಿ ವಿಸರ್ಜಿಸಲಾಯಿತು. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net